ರಸ್ತೆಗೆ ಇಳಿಸುವ ವಾಹನಕ್ಕೆ ಇನ್ನು ಮುಂದೆ ಎಫ್.ಸಿ. ನಾಮಫಲಕ ಅಳವಡಿಕೆ ಕಡ್ಡಾಯ : ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ, ಶೀಘ್ರದಲ್ಲೇ ನಿಯಮವಾಗಿ ಜಾರಿ - Karavali Times ರಸ್ತೆಗೆ ಇಳಿಸುವ ವಾಹನಕ್ಕೆ ಇನ್ನು ಮುಂದೆ ಎಫ್.ಸಿ. ನಾಮಫಲಕ ಅಳವಡಿಕೆ ಕಡ್ಡಾಯ : ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ, ಶೀಘ್ರದಲ್ಲೇ ನಿಯಮವಾಗಿ ಜಾರಿ - Karavali Times

728x90

4 March 2022

ರಸ್ತೆಗೆ ಇಳಿಸುವ ವಾಹನಕ್ಕೆ ಇನ್ನು ಮುಂದೆ ಎಫ್.ಸಿ. ನಾಮಫಲಕ ಅಳವಡಿಕೆ ಕಡ್ಡಾಯ : ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ, ಶೀಘ್ರದಲ್ಲೇ ನಿಯಮವಾಗಿ ಜಾರಿ

ಹೊಸ ನಿಯಮ ಪ್ರಕಾರ ಫಿಟ್ನೆಸ್ ಸರ್ಟಿಫಿಕೇಟ್ ಸ್ಟಿಕ್ಕರ್ ಇಲ್ಲದ ವಾಹನಗಳಿಗೆ ಭಾರೀ ದಂಡ
ನವದೆಹಲಿ, ಮಾರ್ಚ್ 04, 2022 (ಕರಾವಳಿ ಟೈಮ್ಸ್) : ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡುತ್ತಿದ್ದು, ಇನ್ನು ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ಅಥವಾ ಎಫ್ ಸಿ ಇಲ್ಲದೆ ವಾಹನವನ್ನು ರಸ್ತೆಗೆ ಇಳಿಸುವಂತಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ರಸ್ತೆಗೆ ಇಳಿಯಲಿರುವ ಎಲ್ಲಾ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ. ಫಿಟ್ನೆಸ್ ಪ್ರಮಾಣ ಪತ್ರ ಹಾಗೂ ಅದರ ನೋಂದಣಿ ಚಿಹ್ನೆಯ ನಿಗದಿತ ಮಾನದಂಡದ ರೀತಿಯಲ್ಲಿ ತೋರಿಸಬೇಕಾಗುತ್ತದೆ. ಈ ಕುರಿತಾದ ಕರಡು ಅಧಿಸೂಚನೆಯನ್ನು ಕೇಂದ್ರ ಸರಕಾರ ಗುರುವಾರ ಹೊರಡಿಸಿದ್ದು, ಶೀಘ್ರದಲ್ಲಿಯೇ ಇದು ನಿಯಮವಾಗಿ ಜಾರಿಯಾಗಲಿದೆ.

ಫಿಟ್‍ನೆಸ್ ಪ್ರಮಾಣ ಪತ್ರದ ಫಲಕವು ವಾಹನದ ನಂಬರ್ ಪ್ಲೇಟ್‍ನಂತೆಯೇ ಇರಲಿದ್ದು, ವಾಹನದ ಫಿಟ್‍ನೆಸ್ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಫಿಟ್‍ನೆಸ್ ಪ್ರಮಾಣಪತ್ರವು ದಿನಾಂಕ-ತಿಂಗಳು-ವರ್ಷ ಮಾದರಿಯಲ್ಲಿರಬೇಕು ಎಂದು ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ. ಈ ಮಾದರಿಯಲ್ಲಿ ಇರದಿದ್ದಲ್ಲಿ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ ಎಂದೂ ತಿಳಿಸಿದೆ. 

ಭಾರೀ ಸರಕುಗಳು/ ಪ್ರಯಾಣಿಕರ ವಾಹನಗಳು, ಮಧ್ಯಮ ಸರಕುಗಳು/ ಪ್ರಯಾಣಿಕರ ವಾಹನಗಳು  ಮತ್ತು ಲಘು ಮೋಟಾರು ವಾಹನಗಳ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ವಿಂಡ್‍ಸ್ಕ್ರೀನಿನ ಎಡಭಾಗದ ಮೇಲಿನ ಅಂಚಿನಲ್ಲಿ ಪ್ರದರ್ಶಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆಟೋ-ರಿಕ್ಷಾಗಳು, ಇ-ರಿಕ್ಷಾಗಳು, ಇ-ಕಾರ್ಟ್‍ಗಳು ಮತ್ತು ಕ್ವಾಡ್ರಿ ಸೈಕಲ್‍ಗಳ ವಿಚಾರದಲ್ಲಿ, ಪ್ರಮಾಣಪತ್ರವನ್ನು ವಿಂಡ್‍ಸ್ಕ್ರೀನಿನ ಎಡಭಾಗದ ಮೇಲಿನ ಅಂಚಿನಲ್ಲಿ ಕೂರುವುದಾದರೆ ಅಲ್ಲಿ ಪ್ರದರ್ಶನ ಮಾಡಬೇಕು ಎಂದು ತಿಳಿಸಲಾಗಿದೆ. 

ಮೋಟಾರು ಸೈಕಲ್‍ಗಳಲ್ಲಿ ಆಯಾ ವಾಹನದಲ್ಲಿ ಎದ್ದು ಕಾಣುವ ಪ್ರದೇಶದಲ್ಲಿ ಫಿಟ್ನೆಸ್ ಪ್ರಮಾಣಪತ್ರವನ್ನು ಪ್ರದರ್ಶನ ಮಾಡಬೇಕು. ಸಚಿವಾಲಯದ ಅಧಿಸೂಚನೆಯ ಪ್ರಕಾರ, ವಾಹನಗಳು ನೀಲಿ ಹಿನ್ನೆಲೆಯಲ್ಲಿ ಹಳದಿ ಬಣ್ಣದ ಏರಿಯಲ್ ಬೋಲ್ಡ್ ಲಿಪಿಯಲ್ಲಿ ಮಾಹಿತಿಯನ್ನು ಪ್ರದರ್ಶಿಸಬೇಕು. ಇದಲ್ಲದೆ, ರಸ್ತೆ ಸಾರಿಗೆ ಸಚಿವಾಲಯವು ಮುಂದಿನ 30 ದಿನಗಳಲ್ಲಿ ಸಾರ್ವಜನಿಕರು ಮತ್ತು ಇತರ ಮಧ್ಯಸ್ಥಗಾರರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಸರಕಾರದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ 20 ವರ್ಷಕ್ಕಿಂತ ಹಳೆಯದಾದ 51 ಲಕ್ಷ ಲಘು ಮೋಟಾರು ವಾಹನಗಳಿವೆ ಮತ್ತು 34 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಳೆಯವುಗಳಾಗಿವೆ. 15 ವರ್ಷಕ್ಕಿಂತ ಹಳೆಯದಾದ ಇನ್ನೂ 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು ಮಾನ್ಯ ಫಿಟ್‍ನೆಸ್ ಪ್ರಮಾಣಪತ್ರಗಳಿಲ್ಲದೆ ರಸ್ತೆಗಳಲ್ಲಿ ಓಡಾಡುತ್ತಿವೆ. 

ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿ ಅನಿವಾರ್ಯ. ಫಿಟ್ನೆಸ್ ಸರ್ಟಿಫಿಕೇಟ್ ಮೋಟಾರು ವಾಹನಕ್ಕೆ 1,000 ರೂಪಾಯಿ. ಮೂರು ಚಕ್ರ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ 3,500 ರೂಪಾಯಿ. ಕಾರು ಸೇರಿದಂತೆ ಲಘುವಾಹನಕ್ಕೆ 7,500 ರೂಪಾಯಿ.  ಮೀಡಿಯಂ ಗೂಡ್ಸ್ ಹಾಗೂ ಪ್ಯಾಸೇಂಜರ್ ವಾಹನಕ್ಕೆ  10,000 ರೂಪಾಯಿ, ಘನ ವಾಹನ ಹಾಗೂ ಘನ ಪ್ಯಾಸೇಂಜರ್ ವಾಹನಕ್ಕೆ 12,500 ರೂಪಾಯಿ ಪ್ರತಿ ವರ್ಷ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಪಾವತಿಸಬೇಕು.  15 ವರ್ಷಕ್ಕಿಂತ ಹಳೇ ವಾಹನಕ್ಕೆ  ಪ್ರತಿ ವರ್ಷ ಹಸಿರು ತೆರಿಗೆ ಪಾವತಿಸಬೇಕು. ಇದು ನಗರದಿಂದ ನಗರಕ್ಕೆ, ಪಟ್ಟಣ, ಹಳ್ಳಿಗಳಲ್ಲಿ ವ್ಯತ್ಯಾಸವಾಗಲಿದೆ. ದೆಹಲಿಯಲ್ಲಿ ವಾಹನದ ರಸ್ತೆ ತೆರಿಗೆಯೆ ಶೇಕಡಾ 50 ರಷ್ಟು ಮೊತ್ತವನ್ನು ಗ್ರೀನ್ ಟ್ಯಾಕ್ಸ್ ಆಗಿ ಪಾವತಿಸಬೇಕು.

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆಗೆ ಇಳಿಸುವ ವಾಹನಕ್ಕೆ ಇನ್ನು ಮುಂದೆ ಎಫ್.ಸಿ. ನಾಮಫಲಕ ಅಳವಡಿಕೆ ಕಡ್ಡಾಯ : ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ, ಶೀಘ್ರದಲ್ಲೇ ನಿಯಮವಾಗಿ ಜಾರಿ Rating: 5 Reviewed By: karavali Times
Scroll to Top