ಸುಳ್ಯ : ಹಿಟ್ ಆಂಡ್ ಪ್ರಕರಣದಲ್ಲಿ ಪಾದಚಾರಿ ವೃದ್ದ ಸಾವು  - Karavali Times ಸುಳ್ಯ : ಹಿಟ್ ಆಂಡ್ ಪ್ರಕರಣದಲ್ಲಿ ಪಾದಚಾರಿ ವೃದ್ದ ಸಾವು  - Karavali Times

728x90

1 March 2022

ಸುಳ್ಯ : ಹಿಟ್ ಆಂಡ್ ಪ್ರಕರಣದಲ್ಲಿ ಪಾದಚಾರಿ ವೃದ್ದ ಸಾವು 

 ಸುಳ್ಯ, ಮಾರ್ಚ್ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಂಪಾಜೆ ಗ್ರಾಮದ ಮಾಣಿ-ಮೈಸೂರು ಹೆದ್ದಾರಿಯ ಗಡಿಕಲ್ಲು ಎಂಬಲ್ಲಿ ಮಂಗಳವಾರ ಅಪರಿಚಿತ ವಾಹನ ಚಾಲಕ ನಡೆಸಿದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಗಂಭೀರ ಗಾಯಗೊಂಡ ಸರೋಜ್ ಕುಮಾರ್ ಬಿನ್ ವೆಂಕಪ್ಪ ಗೌಡ (60) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

 ಈ ಬಗ್ಗೆ ಅವರ ಪರಿಚಯದ ಸಂಪಾಜೆ ನಿವಾಸಿ ನಾರಾಯಣ ಅವರು ಸುಳ್ಯ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು, ನಾರಾಯಣ ಅವರು ತಮ್ಮ ಮೋಟರ್ ಸೈಕಲಿನಲ್ಲಿ ಹೋಗುತ್ತಿರುವಾಗ ರಸ್ತೆಯ ಬದಿಯಲ್ಲಿ ಸರೋಜ್ ಕುಮಾರ್ ಎಡಗಾಲು ಸಂಪೂರ್ಣ ಚಚ್ಚಿದ ಮತ್ತು ಶರೀರದ ಇತರ ಭಾಗದಲ್ಲಿ ತರಚಿದ ರಕ್ತ ಗಾಯವಾಗಿ ರಸ್ತೆಯ ಬದಿಯಲ್ಲಿ ಬಿದ್ದವರನ್ನು ಉಪಚರಿಸಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಸರೋಜ್ ಕುಮಾರ್ ರವರನ್ನು ಒಳರೋಗಿಯಾಗಿ ದಾಖಲಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಸರೋಜ್ ಕುಮಾರ್ ಅವರು ಬೆಳಿಗ್ಗೆ ವಾಕಿಂಗ್ ಹೋಗುತ್ತಿರುವ ಸಮಯ ಯಾವುದೋ ವಾಹನ ಅದರ ಚಾಲಕ ಸರೋಜ್ ಕುಮಾರ್ ಅವರಿಗೆ ಡಿಕ್ಕಿ ಉಂಟುಮಾಡಿ ವಾಹನವನ್ನು ನಿಲ್ಲಿಸದೇ ಹೋಗಿ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

 ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2022 ಕಲಂ 279, 304(ಎ) ಐಪಿಸಿ ಹಾಗೂ 134 (ಎ ಮತ್ತು ಬಿ) ಐಎಂವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಹಿಟ್ ಆಂಡ್ ಪ್ರಕರಣದಲ್ಲಿ ಪಾದಚಾರಿ ವೃದ್ದ ಸಾವು  Rating: 5 Reviewed By: karavali Times
Scroll to Top