ಬಜ್ಪೆ : ಮಯೂರ ಹೋಮ್ಸ್ ನೂತನ ವಸತಿಗೃಹ ಶುಭಾರಂಭ - Karavali Times ಬಜ್ಪೆ : ಮಯೂರ ಹೋಮ್ಸ್ ನೂತನ ವಸತಿಗೃಹ ಶುಭಾರಂಭ - Karavali Times

728x90

13 April 2022

ಬಜ್ಪೆ : ಮಯೂರ ಹೋಮ್ಸ್ ನೂತನ ವಸತಿಗೃಹ ಶುಭಾರಂಭ

ಮಂಗಳೂರು, ಎಪ್ರಿಲ್ 13, 2022 (ಕರಾವಳಿ ಟೈಮ್ಸ್) : ಮಯೂರ ಕನ್‍ಸ್ಟ್ರಕ್ಷನ್ಸ್‍ರವರ ಮತ್ತೊಂದು “ಮಯೂರ ಹೋಮ್ಸ್” ಎಂಬ ನೂತನ ವಸತಿಗೃಹ ಬಜ್ಪೆ ಜಂಕ್ಷನ್ ಬಳಿ ಇತ್ತೀಚೆಗೆ ಉದ್ಘಾಟನೆಗೊಂಡಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ವಸತಿ ಸಮುಚ್ಛಯ ಉದ್ಘಾಟಿಸಿದರು. ಸ್ಥಳೀಯ ಎಂಜೆಎಂ ಮಸೀದಿ ಖತೀಬ್ ಇಸ್ಮಾಯಿಲ್ ಮನ್ಸೂರ್ ಅಹಮದ್ ಸಾಲಿ ಅಲ್-ಅಮೀರ್, ಬಜ್ಪೆ ಜೋಸೆಫ್ ಚರ್ಚ್ ಧರ್ಮಗುರು ರೋನಾಲ್ಡ್ ಕುಟಿನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಯೂರ ಹೋಮ್ಸ್ 5 ಅಂತಸ್ತುಗಳ ನೂತನ ಅಪಾರ್ಟ್‍ಮೆಂಟಿನಲ್ಲಿ 16 ಫ್ಲಾಟ್‍ಗಳಿದ್ದು, ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪವರ್ ಬ್ಯಾಕ್ ಅಪ್‍ಗೆ ಜನರೇಟರ್ ಅಳವಡಿಸಲಾಗಿದ್ದು, ಲಿಫ್ಟ್ ವ್ಯವಸ್ಥೆಗಳಿವೆ.  24*7 ನೀರಿನ ವ್ಯವಸ್ಥೆಗಳಿಗಾಗಿ ಬೋರ್‍ವೆಲ್ ಹಾಗೂ ಪಟ್ಟಣ ಪಂಚಾಯತ್ ನೀರಿನ ಪೈಪ್‍ಗಳನ್ನು ಅಳವಡಿಸಲಾಗಿದ್ದು ಎಸ್.ಟಿ.ಪಿ.ಯಂತಹ ನೂತನ ಟ್ರೀಟ್‍ಮೆಂಟ್ ಪ್ಲಾಂಟನ್ನು ವ್ಯವಸ್ಥೆಗೊಳಿಸಲಾಗಿದೆ.

ಬಜ್ಪೆ ಪರಿಸರದಲ್ಲೊಂದು ನೂತನ ವಾಸ್ತವ್ಯ ಉಪಯೋಗಿ ಕಟ್ಟಡವೊಂದು ರೆಡಿಯಾಗಿದ್ದು, ಮಸೀದಿ, ಶಾಲೆ ಹಾಗೂ ಮಾರ್ಕೆಟ್‍ಗಳಿಗೆ ಅತೀ ಹತ್ತಿರವಾಗಿರುವ ಹಾಗೂ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಹಕಾರವಾಗಲೆಂಬ ಸದುದ್ದೇಶದಿಂದ ಈ ‘ಮಯೂರ ಹೋಮ್ಸ್’ ಮೂಡಿ ಬಂದಿದೆ.

ಕೆಲವೇ ಕೆಲ ಫ್ಲಾಟ್‍ಗಳು ಲಭ್ಯವಿದ್ದು, ಬುಕಿಂಗ್‍ಗಾಗಿ ಮೊಬೈಲ್ ಸಂಖ್ಯೆ 9900553525 ಅಥವಾ 9379014455ಗಳಿಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಜ್ಪೆ : ಮಯೂರ ಹೋಮ್ಸ್ ನೂತನ ವಸತಿಗೃಹ ಶುಭಾರಂಭ Rating: 5 Reviewed By: karavali Times
Scroll to Top