ಮಂಗಳೂರು : ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಂದ ಕೆಫೆಯಲ್ಲಿ ಓಪನ್ ಫೈಟಿಂಗ್ ವೀಡಿಯೋ ವೈರಲ್  - Karavali Times ಮಂಗಳೂರು : ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಂದ ಕೆಫೆಯಲ್ಲಿ ಓಪನ್ ಫೈಟಿಂಗ್ ವೀಡಿಯೋ ವೈರಲ್  - Karavali Times

728x90

5 April 2022

ಮಂಗಳೂರು : ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಂದ ಕೆಫೆಯಲ್ಲಿ ಓಪನ್ ಫೈಟಿಂಗ್ ವೀಡಿಯೋ ವೈರಲ್ 

 ಮಂಗಳೂರು, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಮುಂಭಾಗದ ಕೆಫೆಯಲ್ಲೇ ಓಪನ್ ಫೈಟಿಂಗ್ ನಡೆಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. 

 ನಗರದ ಬಾವುಟಗುಡ್ಡೆಯ ಕೆಫೆಯಲ್ಲಿ ಈ ಹೊಡೆದಾಟ ನಡೆದಿದ್ದು, ಕಳೆದ ವಾರ ನಡೆದ ಘಟನೆ ಎನ್ನಲಾಗಿದೆ. ಕೆಫೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಸಹಿತ ಅನೇಕ ಮಂದಿ ಉಪಾಹಾರ ಸೇವಿಸುತ್ತಿದ್ದರು. ಈ ಮಧ್ಯೆ ಕಾಲೇಜು ಯೂನಿಫಾರ್ಮ್ ಧರಿಸಿದ ಎರಡು-ಮೂರು ವಿದ್ಯಾರ್ಥಿನಿಯರು ಏಕಾಏಕಿ ಕೆಫೆ ಒಳಭಾಗದಲ್ಲೇ ಪರಸ್ಪರ ಫೈಟಿಂಗ್ ಆರಂಭಿಸಿದ್ದು, ಕೆಫೆಯಲ್ಲಿದ್ದ ಯುವಕರು ಹಾಗೂ ಕೆಫೆ ಮಾಲಿಕ ತಡೆಯಲು ಯತ್ನಿಸಿದರೂ ಯುವತಿಯರು ಕ್ಯಾರೇ ಎನ್ನದೆ ಹೊಡೆದಾಟ ಮುಂದುವರಿಸಿದ್ದಾರೆ. 

 ಓರ್ವ ವಿದ್ಯಾರ್ಥಿನಿ ಕೆಫೆಯಿಂದ ಹೊರಗೆ ಬಂದು ಕಲ್ಲು ಎತ್ತಿ ಕೆಫೆಯ ಒಳಭಾಗದಲ್ಲಿ ಇನ್ನೊಬ್ಬಳು ವಿದ್ಯಾರ್ಥಿನಿಗೆ ಎಸೆಯುವ ದೃಶ್ಯವೂ ವೀಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾವ ವಿಚಾರಕ್ಕೆ ಈ ಹೊಡೆದಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. 

ಕಾಲೇಜಿನ ಪ್ರಥಮ‌ ಪಿಯುಸಿ ಹಾಗೂ ಪದವಿ ತರಗತಿಯ ವಿದ್ಯಾರ್ಥಿನಿಯರ ಮಧ್ಯೆ ಈ ಫೈಟಿಂಗ್ ನಡೆದಿದೆ ಎನ್ನಲಾಗುತ್ತಿದ್ದರೂ ವಿದ್ಯಾರ್ಥಿನಿಯರ ಸ್ಪಷ್ಟ ವಿವರ ಗೊತ್ತಾಗಿಲ್ಲ. ವಿದ್ಯಾರ್ಥಿನಿಯರ ನಡುವಿನ ಹೊಡೆದಾಟದ ದೃಶ್ಯವನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳೇ ಮೊಬೈಲ್ ಮೂಲಕ ವೀಡಿಯೊ ಚಿತ್ರೀಕರಣ ನಡೆಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಒ

ಒಟ್ಟಾರೆ ಇದೀಗ ಯುವತಿಯ ಓಪನ್ ಫೈಟಿಂಗ್ ವೀಡಿಯೋ ವೈರಲ್ ಬಳಿಕ ಪೊಲೀಸರು ಹಾಗೂ ಕಾಲೇಜು ಆಡಳಿತ ಘಟನೆಯ ಸೀಸಿ ಟೀವಿ ಫೂಟೇಜ್ ಸಂಗ್ರಹಿಸಿ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಂದ ಕೆಫೆಯಲ್ಲಿ ಓಪನ್ ಫೈಟಿಂಗ್ ವೀಡಿಯೋ ವೈರಲ್  Rating: 5 Reviewed By: karavali Times
Scroll to Top