ಕಡಬ, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಪ್ರೀತಿಸಿದ ಹುಡುಗಿಯನ್ನು ಅಟೋ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಸಂಚರಿಸುತ್ತಿದ್ದಾಗ ರಿಕ್ಷಾ ತಡೆದು ನೈತಿಕ ಪೊಲೀಸ್‍ಗಿರಿ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಅನಿಲ ಮನೆ ನಿವಾಸಿ ಸಂಜೀವ ಗೌಡ ಅವರ ಪುತ್ರ ಬಾಲಚಂದ್ರ (35) ಹಾಗೂ ದೇರಣೆ ಮನೆ ನಿವಾಸಿ ಹೋನಪ್ಪ ಗೌಡ ಅವರ ಪುತ್ರ ರಂಜಿತ್ (31) ಎಂದು ಹೆಸರಿಸಲಾಗಿದೆ.
ಪುತ್ತೂರು ತಾಲೂಕು, ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಇಲಿಯಾಸ್ ಎಂಬವರ ಪುತ್ರ ನಝೀರ್ (21) ಮಂಗಳವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ತನ್ನ ನೋಂದಣಿ ಸಂಖ್ಯೆ ಕೆಎ-21 ಸಿ2713 ಯ ಅಟೋ ರಿಕ್ಷಾದಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಗುಂಡ್ಯಕ್ಕೆ ಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಆರೋಪಿಗಳಾದ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಹಾಗೂ ಇತರರು ಅಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಜೋಡಿಯನ್ನು ಪ್ರಶ್ನಿಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿ ನಝೀರ್‍ಗೆ ಕೈಯಿಂದ ಹಾಗೂ ಬೆತ್ತದಿಂದ ಮುಖಕ್ಕೆ, ತಲೆಗೆ, ಬೆನ್ನಿಗೆ, ಕಾಲಿಗೆ ಕೈಗೆ ಹಲ್ಲೆ ನಡೆಸಿರುವುದಲ್ಲದೆ ಜೀವಬೆದರಿಕೆ ಒಡ್ಡಿರುವುದಾಗಿ ನಝೀರ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2022 ಕಲಂ 143, 147, 341, 504, 323, 324, 506, 153(ಎ) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಾದ ಸುರೇಂದ್ರ, ತೀರ್ಥಪ್ರಸಾದ್ ಹಾಗೂ ಜೀತೇಶ್ ಅವರನ್ನು ಬಂಧಿಸಿದ್ದಾರೆ.
0 comments:
Post a Comment