ಕಡಬ : ಗುಡ್ಡದಲ್ಲಿ ವೃದ್ದನ ಮೃತದೇಹ ಪತ್ತೆ ಪ್ರಕರಣದಲ್ಲಿ ಸಹೋದರನ ವಿರುದ್ದ ಕೊಲೆ ಆರೋಪದಲ್ಲಿ ಪ್ರಕರಣ ದಾಖಲು - Karavali Times ಕಡಬ : ಗುಡ್ಡದಲ್ಲಿ ವೃದ್ದನ ಮೃತದೇಹ ಪತ್ತೆ ಪ್ರಕರಣದಲ್ಲಿ ಸಹೋದರನ ವಿರುದ್ದ ಕೊಲೆ ಆರೋಪದಲ್ಲಿ ಪ್ರಕರಣ ದಾಖಲು - Karavali Times

728x90

10 April 2022

ಕಡಬ : ಗುಡ್ಡದಲ್ಲಿ ವೃದ್ದನ ಮೃತದೇಹ ಪತ್ತೆ ಪ್ರಕರಣದಲ್ಲಿ ಸಹೋದರನ ವಿರುದ್ದ ಕೊಲೆ ಆರೋಪದಲ್ಲಿ ಪ್ರಕರಣ ದಾಖಲು

ಕಡಬ, ಎಪ್ರಿಲ್ 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಲ್ತಾಡು ಗ್ರಾಮ ಬೊಳಿಯಾಲದ ಸರಕಾರಿ ಗುಡ್ಡದಲ್ಲಿ ಪತ್ತೆಯಾದ ವೃದ್ದನ ಮೃತದೇಹಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ಎಂಬ ಸಂಶಯ ವ್ಯಕ್ತಪಡಿಸಿ ಪುತ್ರಿ ನೀಡಿದ ದೂರಿನಂತೆ ಮೃತರ ಸಹೋದರ ಹಾಗೂ ಅವರ ಪುತ್ರನ ವಿರುದ್ದ ಪ್ರಕರಣ ದಾಖಲಾಗಿದೆ. 

ಸ್ಥಳೀಯ ನಿವಾಸಿ ಶೇಷಪ್ಪ ಪೂಜಾರಿ (76) ಎಂಬವರೇ ಕೊಲೆಯಾದ ವೃದ್ದ. ಈ ಬಗ್ಗೆ ಮೃತರ ಪುತ್ರಿ ಶ್ರೀಮತಿ ಪುಷ್ಪಾವತಿ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಮೃತದೇಹ ಪತ್ತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಇದೀಗ ಸಹೋದರ ಹಾಗೂ ಪುತ್ರನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮೃತ ಶೇಷಪ್ಪ ಪೂಜಾರಿ ಅವರು 1980 ರಿಂದ ಪತ್ನಿ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು, ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಂದ ಹಣವನ್ನು ಮದ್ಯ ಸೇವನೆ ಮಾಡುತ್ತಾ ಇದ್ದು, ಕಳೆದ ಒಂದು ವರ್ಷದಿಂದ ಬಲ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಅವರ ಸಹೋದರ ಬಾಲಕೃಷ್ಣ ಪೂಜಾರಿಯವರ ಮನೆಯಾದ ಪಾಲ್ತಾಡು ಗ್ರಾಮದ ಬೊಳಿಯಾಲ ಎಂಬಲ್ಲಿ ವಿಶ್ರಾಂತಿಯಲ್ಲಿದ್ದರು. ಈ ಮಧ್ಯೆ ಮೊನ್ನೆ ಪುಷ್ಪಾವತಿ ಅವರ ಸಹೋದರಿ ಶುಭವತಿ ಅವರು ಕರೆ ಮಾಡಿ ತಂದೆಯವರ ಮೃತದೇಹ ಬೊಳಿಯಾಲ ಎಂಬಲ್ಲಿ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಸರಕಾರಿ ಗುಡ್ಡ ಜಮೀನಿನಲ್ಲಿ ಪತ್ತೆಯಾಗಿದ್ದು, ಕೆಲವು ತಿಂಗಳ ಹಿಂದೆ ಮೃತಪಟ್ಟು ಕೊಳೆತು ಹೋಗಿ ಅಸ್ತಿ ಪಂಜರ ಹಾಗೂ ಮೂಳೆಗಳು ಬಿದ್ದುಕೊಂಡಿರುವ ವಿಚಾರ ತಿಳಿಸಿದ ಹಿನ್ನಲೆಯಲ್ಲಿ ಪುಷ್ಪಾವತಿ ಅವರು ತಂದೆಯವರ ಮರಣದಲ್ಲಿ ಸಂಶಯ ಇರುವುದಾಗಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. 

ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದನ್ನು ತನಿಖೆ ನಡೆಸುವಂತೆ ಪೊಲೀಸರಲ್ಲಿ ವಿನಂತಿಸಿದ್ದಲ್ಲದೆ  ತಂದೆ ಶೇಷಪ್ಪ ಪೂಜಾರಿಯವರನ್ನು ಅವರ ಪಾಲಿನ ಜಮೀನನ್ನು ವಶಕ್ಕೆ ಪಡೆಯುವ ಅಥವಾ ವೃದ್ಧ ಶೇಷಪ್ಪ ಪೂಜಾರಿಯವರ ಆರೈಕೆ ಮಾಡಲು ಬೇಸತ್ತು ಸಹೋದರ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣು ಗೋಪಾಲ ಸೇರಿಕೊಂಡು ಯಾವುದೋ ರೀತಿಯಲ್ಲಿ ಕೊಲೆ ಮಾಡಿ, ಯಾರಿಗೂ ತಿಳಿಯದಂತೆ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಗುಡ್ಡ ಜಾಗದಲ್ಲಿ ಹಾಕಿ, ತಂದೆಯವರು ಫೆಬ್ರವರಿ 5 ರಿಂದ ಬೊಳಿಯಾಲ ಮನೆಯಿಂದ ಕಾಣೆಯಾಗಿರುವುದಾಗಿ ಊರಿನಲ್ಲಿ ಸುದ್ದಿ ಮಾಡಿ ಸಾಕ್ಷಿ ನಾಶ ಮಾಡಿರುತ್ತಾರೆ ಎಂದು ದೂರು ನೀಡಿದ್ದರು.

ಮೃತರ ಪುತ್ರಿಯ ದೂರಿನಂತೆ ಇದೀಗ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2022 ಕಲಂ 302, 201 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಗುಡ್ಡದಲ್ಲಿ ವೃದ್ದನ ಮೃತದೇಹ ಪತ್ತೆ ಪ್ರಕರಣದಲ್ಲಿ ಸಹೋದರನ ವಿರುದ್ದ ಕೊಲೆ ಆರೋಪದಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top