ಕೊಡಾಜೆ ಅಕ್ರಮ ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸ್ ದಾಳಿ : ಮೂವರ ಬಂಧನ, ಮೂವರು ಪರಾರಿ - Karavali Times ಕೊಡಾಜೆ ಅಕ್ರಮ ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸ್ ದಾಳಿ : ಮೂವರ ಬಂಧನ, ಮೂವರು ಪರಾರಿ - Karavali Times

728x90

7 April 2022

ಕೊಡಾಜೆ ಅಕ್ರಮ ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸ್ ದಾಳಿ : ಮೂವರ ಬಂಧನ, ಮೂವರು ಪರಾರಿ

ಬಂಟ್ವಾಳ, ಎಪ್ರಿಲ್ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಗ್ರಾಮದ ಕೊಡಾಜೆಯಲ್ಲಿ ಕಾನೂನು ಬಾಹಿರವಾಗಿ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ನಗದು, ಇಸ್ಪೀಟ್ ಎಲೆ ಹಾಗೂ ಇತರ ಸೊತ್ತುಗಳ ಸಹಿತ 3 ಮಂದಿ ಆರೋಪಿಗಳಾದ ಯೋಗೀಶ್, ಮುಹಮ್ಮದ್ ಶರೀಫ್ ಹಾಗೂ ಬಾಬು ಅಲಿಯಾಸ್ ಯಾದವ ಎಂಬವರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇತರ 3 ಮಂದಿ ಆರೋಪಿಗಳಾದ ಕಿಶೋರ್ ಕೊಡಾಜೆ, ರವಿ ಕೊಡಾಜೆ ಹಾಗೂ ಜಗದೀಶ್ ಏಮಾಜೆ ಎಂಬವರು ಪೊಲೀಸರ ದಾಳಿ ವೇಳೆ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 

ದಾಳಿ ವೇಳೆ ಪೊಲೀಸರು ಉಲಾಯಿ-ಪಿದಾಯಿ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 1,370/- ರೂಪಾಯಿ ನಗದು ಹಾಗೂ 1,380/- ರೂಪಾಯಿ ಮೌಲ್ಯದ ವಿವಿಧ ಜಾತಿಯ 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2022 ಕಲಂ 87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಡಾಜೆ ಅಕ್ರಮ ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸ್ ದಾಳಿ : ಮೂವರ ಬಂಧನ, ಮೂವರು ಪರಾರಿ Rating: 5 Reviewed By: karavali Times
Scroll to Top