ಕನ್ಯಾನ : ತಮ್ಮನ ಕೊಲೆ ಮಾಡಿದ ಆರೋಪಿ ಅಣ್ಣ ಐತಪ್ಪ ನಾಯ್ಕ ಬಂಧನ, ಭತ್ತದ ಫಸಲಿನ ಪಾಲಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ - Karavali Times ಕನ್ಯಾನ : ತಮ್ಮನ ಕೊಲೆ ಮಾಡಿದ ಆರೋಪಿ ಅಣ್ಣ ಐತಪ್ಪ ನಾಯ್ಕ ಬಂಧನ, ಭತ್ತದ ಫಸಲಿನ ಪಾಲಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ - Karavali Times

728x90

11 May 2022

ಕನ್ಯಾನ : ತಮ್ಮನ ಕೊಲೆ ಮಾಡಿದ ಆರೋಪಿ ಅಣ್ಣ ಐತಪ್ಪ ನಾಯ್ಕ ಬಂಧನ, ಭತ್ತದ ಫಸಲಿನ ಪಾಲಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬಂಟ್ವಾಳ, ಮೇ 11, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಮಂಗಳವಾರ (ಮೇ 10) ತಮ್ಮ ಬಾಳಪ್ಪ ನಾಯ್ಕ ಎಂಬವರನ್ನು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಕೊಲೆಗೈದ ಆರೋಪಿ ಅಣ್ಣ ಐತಪ್ಪ ನಾಯ್ಕ (47) ಎಂಬವರನ್ನು ವಿಟ್ಲ ಪೊಲೀರು ಬುಧವಾರ (ಮೇ 11) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಮೃತ ಬಾಳಪ್ಪ ನಾಯ್ಕ ಪ್ರಸ್ತುತ ಎಣ್ಮಕಜೆ ಗ್ರಾಮದ ಅಡ್ಯನಡ್ಕದಲ್ಲಿ ವಾಸವಾಗಿದ್ದು, ಮಂಗಳವಾರ ತಮ್ಮ ತರವಾಡು ಮನೆಯಲ್ಲಿ ಗೊಂದೋಳು ಪೂಜೆ ಇದ್ದುದರಿಂದ ತಾಯಿ ಜೊತೆಗೆ ಬಂದಿದ್ದರು. ಈ ವೇಳೆ ಸಹೋದರರಿಬ್ಬರೂ ತಕಾರಾರು ಇರುವ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಗಲಾಟೆ ಉಂಟಾಗಿದೆ. ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿರುವುದಾಗಿದೆ. 

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2022 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ತಮ್ಮನ ಕೊಲೆ ಮಾಡಿದ ಆರೋಪಿ ಅಣ್ಣ ಐತಪ್ಪ ನಾಯ್ಕ ಬಂಧನ, ಭತ್ತದ ಫಸಲಿನ ಪಾಲಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ Rating: 5 Reviewed By: karavali Times
Scroll to Top