ಪಕ್ಷ ನಿಷ್ಠರಿಗೆ, ಗ್ರೂಪಿಸಂ ಮಾಡದವರಿಗೆ ಪರಿಷತ್ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿ ಕೈ ಕಮಾಂಡ್ - Karavali Times ಪಕ್ಷ ನಿಷ್ಠರಿಗೆ, ಗ್ರೂಪಿಸಂ ಮಾಡದವರಿಗೆ ಪರಿಷತ್ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿ ಕೈ ಕಮಾಂಡ್ - Karavali Times

728x90

23 May 2022

ಪಕ್ಷ ನಿಷ್ಠರಿಗೆ, ಗ್ರೂಪಿಸಂ ಮಾಡದವರಿಗೆ ಪರಿಷತ್ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿ ಕೈ ಕಮಾಂಡ್

ಬೆಂಗಳೂರು, ಮೇ 24, 2022 (ಕರಾವಳಿ ಟೈಮ್ಸ್) : ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತೂಗಿ ಅಳೆದು ರಾಜಕೀಯ ಲೆಕ್ಕಾಚಾರ ನಡೆಸಿ ಕೊನೆಗೂ ಅಭ್ಯರ್ಥಿಗಳ ಘೋಷಣೆ ಮಾಡಿದ್ದು ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಿದೆ. 


ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ದಾವಣೆಗೆರೆ ಮೂಲದ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗರಾಜ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಿದೆ.


ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನಾವಾಗಿದ್ದು ಟಿಕೆಟ್ ಸರ್ಕಸ್ ಫೈಟ್ ನಂತರ ಇದೀಗ ಹೆಸರು ಘೋಷಣೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹಿತ ಹಲವು ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಆದರೆ ಕೈ‌ ಹೈಕಮಾಂಡ್ ಮಾತ್ರ ಇದ್ಯಾವುದಕ್ಕೂ ಮಣೆ ಹಾಕದೆ ಪಕ್ಷ ನಿಷ್ಠರಿಗೆ ಯಾವುದೇ ಗುಂಪಿಗೆ ಸೇರದವರಿಗೆ ಟಿಕೆಟ್ ದಯಪಾಲಿಸಿ ಬದ್ದತೆ ಪ್ರದರ್ಶಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಕ್ಷ ನಿಷ್ಠರಿಗೆ, ಗ್ರೂಪಿಸಂ ಮಾಡದವರಿಗೆ ಪರಿಷತ್ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿ ಕೈ ಕಮಾಂಡ್ Rating: 5 Reviewed By: lk
Scroll to Top