ಮಾಜಿ ಸಚಿವ ಮಧ್ವರಾಜ್, ಮಾಜಿ ಶಾಸಕ ವರ್ತೂರು ಪ್ರಕಾಶ್ ಸಹಿತ ಹಲವರು ಕಮಲ ಪಾಳಯಕ್ಕೆ - Karavali Times ಮಾಜಿ ಸಚಿವ ಮಧ್ವರಾಜ್, ಮಾಜಿ ಶಾಸಕ ವರ್ತೂರು ಪ್ರಕಾಶ್ ಸಹಿತ ಹಲವರು ಕಮಲ ಪಾಳಯಕ್ಕೆ - Karavali Times

728x90

7 May 2022

ಮಾಜಿ ಸಚಿವ ಮಧ್ವರಾಜ್, ಮಾಜಿ ಶಾಸಕ ವರ್ತೂರು ಪ್ರಕಾಶ್ ಸಹಿತ ಹಲವರು ಕಮಲ ಪಾಳಯಕ್ಕೆ

ಬೆಂಗಳೂರು, ಮೇ 07, 2022 (ಕರಾವಳಿ ಟೈಮ್ಸ್) : ಕಾಂಗ್ರೆಸ್ ತೊರೆದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಹಲವು ನಾಯಕರು ಶನಿವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

ಬೆಂಗಳೂರಿನ ಖಾಸಗಿ ಹೊಟೇಲಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪ್ರಮೋದ್ ಮಧ್ವರಾಜ್ ಹಾಗೂ ವರ್ತೂರು ಪ್ರಕಾಶ್ ಅವರು ಬಿಜೆಪಿ ಪಕ್ಷವನ್ನು ಸೇರಿಕೊಂಡರು.

ಬಿಜೆಪಿ ಸೇರ್ಪಡೆಯಾದವರಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಮಾಲೂರು ಮಂಜುನಾಥ್ ಗೌಡ, ಮಂಡ್ಯ ಭಾಗದ ಲಕ್ಷ್ಮೀ ಅಶ್ವಿನ್ ಗೌಡ, ಅಶೋಕ್ ಜಯರಾಮ್, ಮಾಜಿ ಎಂಎಲ್‍ಸಿ ಸಂದೇಶ್ ನಾಗರಾಜ್ ಅವರು ಪ್ರಮುಖರಾಗಿದ್ದಾರೆ. 

ಈ ಸಂದರ್ಭ ಸಚಿವರಾದ ಆರ್ ಅಶೋಕ್, ಎಸ್.ಟಿ ಸೋಮಶೇಖರ್, ನಾರಾಯಣಗೌಡ, ಗೋಪಾಲಯ್ಯ, ಮುನಿರತ್ನ, ಸುಧಾಕರ್, ಸಂಸದ ಮುನಿಸ್ವಾಮಿ, ಎಂಎಲ್‍ಸಿ ಸಿ.ಪಿ ಯೋಗೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಸಚಿವ ಮಧ್ವರಾಜ್, ಮಾಜಿ ಶಾಸಕ ವರ್ತೂರು ಪ್ರಕಾಶ್ ಸಹಿತ ಹಲವರು ಕಮಲ ಪಾಳಯಕ್ಕೆ Rating: 5 Reviewed By: karavali Times
Scroll to Top