ಬಂಟ್ವಾಳ, ಮೇ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಂಗಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ತೌಸೀಫ್ ಅವರ ಮನೆಯ ಕಾರು ಪಾರ್ಕಿಂಗ್ ಜಾಗದಲ್ಲಿರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸುಲಿಯದ ಅಡಿಕೆಯನ್ನು ಕಳ್ಳರು ಎಗರಿಸಿದ ಬಗ್ಗೆ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಮೇ 13 ರಂದು ರಾತ್ರಿಯಿಂದ ಮೇ 14ರ ಬೆಳಿಗ್ಗಿನ ಅವಧಿಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ತೌಸೀಫ್ ಅವರು ಅಗತ್ಯ ಕೆಲಸ ನಿಮಿತ್ತ ಮಡಿಕೇರಿಗೆ ತೆರಳಿದವರು ಶುಕ್ರವಾರ ಬೆಳಿಗ್ಗೆ ಬಂದು ನೋಡಿದಾಗ ಬೆಳಕಿಗೆ ಬಂದಿದೆ.
ಸುಮಾರು 8 ಗೋಣಿ ಸುಲಿಯದ ಅಡಿಕೆಗಳು ಕಳವಾಗಿದ್ದು, ಕಳವಾದ ಅಡಿಕೆಯ ಒಟ್ಟು ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 35/2022 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment