ಜುಲೈ 1 ರಿಂದ ಪ್ಯಾನ್-ಆಧಾರ್ ಲಿಂಕ್ ದಂಡದ ಮೊತ್ತ ಸಾವಿರ ರೂಪಾಯಿಗೆ ಏರಿಕೆ - Karavali Times ಜುಲೈ 1 ರಿಂದ ಪ್ಯಾನ್-ಆಧಾರ್ ಲಿಂಕ್ ದಂಡದ ಮೊತ್ತ ಸಾವಿರ ರೂಪಾಯಿಗೆ ಏರಿಕೆ - Karavali Times

728x90

28 June 2022

ಜುಲೈ 1 ರಿಂದ ಪ್ಯಾನ್-ಆಧಾರ್ ಲಿಂಕ್ ದಂಡದ ಮೊತ್ತ ಸಾವಿರ ರೂಪಾಯಿಗೆ ಏರಿಕೆ

ನವದೆಹಲಿ, ಜೂನ್ 28, 2022 (ಕರಾವಳಿ ಟೈಮ್ಸ್) : ಆಧಾರ್ ಕಾರ್ಡಿನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್  ಮಾಡಲು ಬಾಕಿ ಇರುವ ಗ್ರಾಹಕರಿಗೆ 2022ರ ಎಪ್ರಿಲ್ 1ರ ಬಳಿಕ ವಿಧಿಸಲಾಗುತ್ತಿರುವ 500 ರೂಪಾಯಿ ದಂಡ ಮೊತ್ತವನ್ನು ಜುಲೈ 1 ರ ಬಳಿಕ 1000/- ರೂಪಾಯಿ ಏರಿಸಲಾಗುವುದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. 

ಕೇಂದ್ರ ಸರಕಾರ ಪ್ಯಾನ್-ಆಧಾರ್ ಜೋಡಣೆ ಅಂತಿಮ ಗಡುವನ್ನು ದಂಡ ಮೊತ್ತದೊಂದಿಗೆ 2023ರ ಮಾರ್ಚ್ 31ರ ತನಕ ವಿಸ್ತರಿಸಿದೆ. ಈ ಹಿಂದೆ ದಂಡ ರಹಿತವಾಗಿ ಈ ವರ್ಷದ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಎಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ  500 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗಿದೆ. ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ  1000/- ರೂಪಾಯಿ ದಂಡ ಪಾವತಿಸಬೇಕು ಎಂದು ತಿಳಿಸಿದೆ. 

ಆಧಾರ್ -ಪ್ಯಾನ್ ಲಿಂಕ್ ಮಾಡುವ ಮನವಿ ಸಲ್ಲಿಕೆಯಾಗುವ ಮುನ್ನ ದಂಡ ಕಟ್ಟಬೇಕು. ಜೂನ್ 30ರ ತನಕ 500 ರೂಪಾಯಿ ಹಾಗೂ ಜುಲೈ 1ರ ಬಳಿಕ 1000 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕು.

2023ರ ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ 2023ರ ಎಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡಿನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಿಲ್ಲ. 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡರೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ತೊಂದರೆಯಾಗಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 1 ರಿಂದ ಪ್ಯಾನ್-ಆಧಾರ್ ಲಿಂಕ್ ದಂಡದ ಮೊತ್ತ ಸಾವಿರ ರೂಪಾಯಿಗೆ ಏರಿಕೆ Rating: 5 Reviewed By: karavali Times
Scroll to Top