ಬಂಟ್ವಾಳ ರೋಟರಿಯ 54 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯನ್ನು ಮುನ್ನಡೆಸಲಿರುವ ನರಿಕೊಂಬು ಪ್ರಕಾಶ್ ಕಾರಂತ್ - Karavali Times ಬಂಟ್ವಾಳ ರೋಟರಿಯ 54 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯನ್ನು ಮುನ್ನಡೆಸಲಿರುವ ನರಿಕೊಂಬು ಪ್ರಕಾಶ್ ಕಾರಂತ್ - Karavali Times

728x90

30 June 2022

ಬಂಟ್ವಾಳ ರೋಟರಿಯ 54 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯನ್ನು ಮುನ್ನಡೆಸಲಿರುವ ನರಿಕೊಂಬು ಪ್ರಕಾಶ್ ಕಾರಂತ್

ಜುಲೈ 3 ರಂದು ಸಂಜೆ ಬೆಂಜನಪದವು ಶುಭಲಕ್ಷ್ಮಿ ಸಭಾಂಗಣದಲ್ಲಿ ಪದಗ್ರಹಣ


ಬಂಟ್ವಾಳ, ಜೂನ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದ 54 ವರ್ಷಗಳ ಹಿಂದೆ ಸ್ಥಾಪಿತವಾದ ಪ್ರತಿಷ್ಠಿತ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಯಾವುದೇ ಪ್ರತಿನಿಧಿಗಳು ಇದುವರೆಗೆ ಜಿಲ್ಲಾ ಕ್ಲಬ್ ಮುನ್ನಡೆಸುವ ಅವಕಾಶ ಪಡೆದಿರಲಿಲ್ಲ. ಇದೀಗ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಂಟ್ವಾಳ ಕ್ಲಬ್ಬಿನ್ ಸದಸ್ಯರಾದ ನರಿಕೊಂಬು ಪ್ರಕಾಶ್ ಕಾರಂತ್ ಅವರು ಸ್ಪರ್ಧಿಸಿ ವಿಜೇತರಾಗಿ ಇತಿಹಾಸ ನಿರ್ಮಿಸಿದ್ದು, ಜುಲೈ 3 ರಂದು ಭಾನುವಾರ ಸಂಜೆ 5.30 ಗಂಟೆಗೆ ಬೆಂಜನಪದವು ಶುಭಲಕ್ಷ್ಮಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಆಗಿ ಪದಗ್ರಹಣ ನಡೆಸಲಿದ್ದಾರೆ.

ಈ ಬಗ್ಗೆ ಬುಧವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ನಿಟ್ಟೆ ಮಹಾವಿದ್ಯಾಲಯದ ಎನ್ ವಿನಯ ಹೆಗ್ಡೆ ಹಾಗೂ ರೊ ಪಿಡಿಜಿ ಅಭಿನಂದನ್ ಶೆಟ್ಟಿ ಕುಂದಾಪುರ ಅವರ ಸಮ್ಮುಖದಲ್ಲಿ ಕಳೆದ ಸಾಲಿನ ಜಿಲ್ಲಾ ಗವರ್ನರ್ ರೊ ಎ ಆರ್ ರವೀಂದ್ರ ಭಟ್ ಮೈಸೂರು ಅವರು ಪದಗ್ರಹಣ ನಡೆಸಿಕೊಡುವರು ಎಂದರು. 

ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ಜಿಲ್ಲಾ ನಾಯಕರು, ವಿವಿಧ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತ ಬಂಧುಗಳು ಭಾಗವಹಿಸಲಿರುವರು. ಪದಗ್ರಹಣ ನಡೆಸಲಿರುವ ತನ್ನ ತಂಡದಲ್ಲಿ ಜಿಲ್ಲಾ ಎಡ್ವೆಸರ್ ಆಗಿ ರೊ ಪಿಡಿಜಿ ಎಂ ಎಂ ಸುರೇಶ್ ಚೆಂಗಪ್ಪ, ಕೌನ್ಸಿಲರ್ ಆಗಿ ರೊ ಪಿಡಿಜಿ ಎಂ ರಂಗನಾಥ್ ಭಟ್, ತರಬೇತುದಾರರಾಗಿ ನಿಕಟಪೂರ್ವ ಜಿಲ್ಲಾ ಗವರ್ನರ್ ರೊ ಎ ಆರ್ ರವೀಂದ್ರ ಭಟ್, ಸಹ ತರಬೇತುದಾರರಾಗಿ ರೊ ಬಿ ಶೇಖರ ಶೆಟ್ಟಿ, ಆಡಳಿತ ಕಾರ್ಯದರ್ಶಿಯಾಗಿ ರೊ ಕೆ ನಾರಾಯಣ ಹೆಗ್ಡೆ, ಕಾರ್ಯಕ್ರಮ ಕಾರ್ಯದರ್ಶಿಯಾಗಿ ರೊ ಕೆ ವಿಶ್ವಾಸ್ ಶೆಣ್ಯ, ಯೋಜನಾ ಕಾರ್ಯದರ್ಶಿಯಾಗಿ ರೊ ಎ ರಾಮಣ್ಣ ರೈ, ಜಿಲ್ಲಾ ಯೋಜನೆಗಳ ಕಾರ್ಯದರ್ಶಿಯಾಗಿ ರೊ ರಾಜೇಂದ್ರ ಕಲ್ಬಾವಿ, ಜಿಲ್ಲಾ ಯೋಜನೆಗಳ ಸಂಚಾಲಕರಾಗಿ ರೊ ಅಬ್ಬಾಸ್ ಮುರ, ಜಿಲ್ಲಾ ಖಜಾಂಜಿಯಾಗಿ ರೊ ಮುರಳೀಧರ ಪ್ರಭು, ಹಾಗೂ ಜಿಲ್ಲಾ ಸೇನಾನಿಯಾಗಿ ರೊ ಅವಿಲ್ ಮೆನೇಜಸ್ ಅವರು ಇರಲಿದ್ದಾರೆ ಎಂದರು.

ಬರುವ ವರ್ಷದ ಅಂತರಾಷ್ಟ್ರೀಯ ಅಧ್ಯಕ್ಷೆ ಜೆನ್ನಿಫರ್ ಇ ಜೋನ್ಸ್ ಅವರ ಘೋಷ ವಾಕ್ಯ ಇಮ್ಯಾಜಿನ್ ರೋಟರಿ ರೋಟರಿ ಪರಿಕಲ್ಪನೆಯ ಪ್ರಕಾರ ಯೋಜನೆಗಳನ್ನು ಸಾಮಾನ್ಯ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಅವಶ್ಯಕತೆಗನುಗುಣವಾಗಿ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತರಾಗಲು ಹಾಗೂ ಅನುಷ್ಠಾನಗೊಳಿಸಲು ಬದ್ದರಾಗಿದ್ದೇವೆ ಎಂದ ಪ್ರಕಾಶ್ ಕಾರಂತ್ ಈಗಾಗಲೇ ನಾಲ್ಕು ಜಿಲ್ಲಾ ಯೋಜನೆಗಳಾದ ಜಲಸಿರಿ, ವನಸಿರಿ, ವಿದ್ಯಾ ಸಿರಿ, ಹಾಗೂ ಆರೋಗ್ಯ ಸಿರಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳನ್ನು ಪರಿಸರ ರಕ್ಷಣೆ, ಜನಸಾಮಾನ್ಯರ ಜೀವನ ಉತ್ತಮಗೊಳಿಸುವಲ್ಲಿ ಸಹಕಾರಿಯಾಗುತ್ತವೆ ಎಂಬ ನಂಬಿಕೆಯೊಂದಿಗೆ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದರು. 

ಸುದ್ದಿಗೋಷ್ಠಿಯಲ್ಲಿ ರೋಟರಿ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ, ಮಂಜುನಾಥ ಆಚಾರ್ಯ, ರಾಮಣ್ಣ ರೈ, ಪುಷ್ಪರಾಜ ಹೆಗ್ಡೆ, ಸಂಜೀವ ಪೂಜಾರಿ ಹಾಗೂ ಡಾ ಆತ್ಮರಂಜನ್ ರೈ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ರೋಟರಿಯ 54 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯನ್ನು ಮುನ್ನಡೆಸಲಿರುವ ನರಿಕೊಂಬು ಪ್ರಕಾಶ್ ಕಾರಂತ್ Rating: 5 Reviewed By: karavali Times
Scroll to Top