ಉಪ್ಪಿನಂಗಡಿ, ಜೂನ್ 03, 2022 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಸರಕಾರಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಲೇಜು ಆವರಣಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದಲ್ಲಿ 3 ಮಂದಿ ಪತ್ರಕರ್ತರ ವಿರುದ್ದ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಸುಮಾರು 9.30 ಗಂಟೆಗೆ ಕಾಲೇಜಿಗೆ ಬಂದಿದ್ದು, ಸುಮಾರು 11.30 ಗಂಟೆಗೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಲ್ಲದ ಅಪರಿಚಿತ ಅಜಿತ್ ಕುಮಾರ್ ಕೆ, ಪ್ರವೀಣ್ ಕುಮಾರ್ ಮತ್ತು ಸಿದ್ದೀಕ್ ನಿರಾಜೆ ಎಂಬ ಮೂರು ಮಂದಿ ಅಕ್ರಮ ಪ್ರವೇಶ ಮಾಡಿದ್ದಾರೆ. ಈ ಪೈಕಿ ಅಜಿತ್ ಕುಮಾರ್ ಎಂಬವರು ಬ್ಯಾರಿಗಳು ಯಾಕೆ ಕಾಲೇಜಿಗೆ ಬಂದಿದ್ದು. “ಅಕ್ಲೆಗ್ ಪಳ್ಳಿಗೆ ಪೆÇಯರ್ ಆಪುಜ್ಜಾ” ಎನ್ನುತ್ತಾ ನನ್ನ ಬಳಿ ಬಂದು ಶಾಲನ್ನು ಎಳೆಲು ಯತ್ನಿಸಿದಾಗ ನಾನು ಗಾಬರಿಯಿಂದ ತಪ್ಪಿಸುತ್ತಿದಂತೆ, ಪ್ರವೀಣ್ ಎಂಬಾತನು “ಆಳೆನ ಬುಡೋರ್ಚಿ ಆಳ ಬ್ಯಾರ್ಥಿ ಆಲೇನ ಶಾಲ್ ಒಯ್ಪು” ಎಂಬಿತ್ಯಾದಿಯಾಗಿ ಸಹಚರರಾದ ಸಿದ್ದೀಕ್ ನಿರಾಜೆ ಎಂಬವರಲ್ಲಿ ಹೇಳುತ್ತಾ ಬಂದು ಅಜಿತ್ ಕುಮಾರ್ ನನ್ನ ವಿಡಿಯೋ ಮಾಡುತ್ತಿದ್ದಾಗ ನಾನು, ನೀವು ಯಾರು ಇಲ್ಲಿ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ನನ್ನನ್ನುದ್ದೆಶಿಸಿ ನೀನು ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೀ ಎಂದು ನಾವು ನೋಡುತ್ತೇವೆ ವಿಡಿಯೋ ವೈರಲ್ ಮಾಡುತ್ತೇವೆ. ಎಂದಾಗ ನಾನು ತರಗತಿಗೆ ಹೋಗಿ ಮೌಖಿಕವಾಗಿ ಪ್ರಾಶುಂಪಾಲರಲ್ಲಿ ದೂರು ನೀಡಿದಾಗ ಆ ವ್ಯಕ್ತಿಗಳನ್ನು ಕರೆಯಿಸಿ ಅವರು ಮಾಡಿದ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದು, ಈ ಸಂದರ್ಭ ಆ ಮೂರು ಜನರು ಪತ್ರಕರ್ತರೆಂದು ತಿಳಿಯಿತು. ಇದರಿಂದ ನಾನು ಹೆದರಿ ಜೀವ ಭಯದಿಂದ ಮನೆಯವರಲ್ಲಿ ವಿವರಿಸಿ ಈ ದಿನ ತಡವಾಗಿ ದೂರು ನೀಡಿರುವುದಾಗಿ ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ದೂರಿಕೊಂಡಿದ್ದಾಳೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2022 ಕಲಂ 447, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment