ತಲೆಮೊಗರು ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ - Karavali Times ತಲೆಮೊಗರು ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ - Karavali Times

728x90

6 July 2022

ತಲೆಮೊಗರು ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ

ಬಂಟ್ವಾಳ, ಜುಲೈ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ತಲೆಮೊಗರುವಿನಲ್ಲಿ ಭಾನುವಾರ ಸಂಜೆ ನೀರುಪಾಲಾಗಿದ್ದ ಯುವಕ ಅಶ್ವಿತ್ ಗಾಣಿಗ (19) ಎಂಬವರ ಮೃತದೇಹ ಬುಧವಾರ ಉಳ್ಳಾಲ-ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. 

ತಲೆಮೊಗರು ನಿವಾಸಿ ನಾಗೇಶ್ ಗಾಣಿಗ ಅವರ ಮನೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಗುವಿನ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಅಶ್ವಿತ್ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಲೆಮೊಗರು ನೇತ್ರಾವತಿ ನದಿಯಲ್ಲಿ ಸಂಬಂಧಿಕ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದರು. ಈ ವೇಳೆ ಅಶ್ವಿತ್ ಮತ್ತು ಹರ್ಷ ಎಂಬವರು ನೀರಿನ ಸೆಳೆತಕ್ಕೆ ಸಿಲುಕಿದ್ದು, ಈ ವೇಳೆ ಸ್ಥಳೀಯರು ಹರ್ಷನನ್ನು ರಕ್ಷಿಸಿ ಮೇಲಕ್ಕೆತ್ತಿದ್ದರು. ಆದರೆ ಅಶ್ವಿತ್ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಈಜುಪಟು ಯುವಕರು ಸೇರಿ ನಿರಂತರ ಹುಟುಕಾಟ ನಡೆಸಿದ್ದರೂ ಅಶ್ವಿತ ಮೃತದೇಹ ಪತ್ತೆ ಹಚ್ಚಲು ವಿಫಲರಾಗಿದ್ದರು. ಬುಧವಾರ ಬೆಳಗ್ಗೆ ಉಳ್ಳಾಲ-ಕೋಡಿಯ ಸಮುದ್ರತೀರದಲ್ಲಿ ಅಶ್ವಿತ್ ಗಾಣಿಗನ ಮೃತದೇಹ ಪತ್ತೆಯಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ತಲೆಮೊಗರು ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ Rating: 5 Reviewed By: karavali Times
Scroll to Top