ಮರಣ ಬೆನ್ನ ಹಿಂದಿದೆ, ದ್ಬೇಷಾಸೂಯೆ ಸಾಧಿಸುವ ಸಮಯ ಇದಲ್ಲ : ಬಿ ಎಚ್ ಉಸ್ತಾದ್ ಬಕ್ರೀದ್ ಸಂದೇಶ - Karavali Times ಮರಣ ಬೆನ್ನ ಹಿಂದಿದೆ, ದ್ಬೇಷಾಸೂಯೆ ಸಾಧಿಸುವ ಸಮಯ ಇದಲ್ಲ : ಬಿ ಎಚ್ ಉಸ್ತಾದ್ ಬಕ್ರೀದ್ ಸಂದೇಶ - Karavali Times

728x90

9 July 2022

ಮರಣ ಬೆನ್ನ ಹಿಂದಿದೆ, ದ್ಬೇಷಾಸೂಯೆ ಸಾಧಿಸುವ ಸಮಯ ಇದಲ್ಲ : ಬಿ ಎಚ್ ಉಸ್ತಾದ್ ಬಕ್ರೀದ್ ಸಂದೇಶ

 ಬಂಟ್ವಾಳ, ಜುಲೈ 10, 2022 (ಕರಾವಳಿ ಟೈಮ್ಸ್) : ಮನುಷ್ಯ ಜೀವನ ಅತ್ಯಲ್ಪವಾದುದು, ಮರಣ ಬೆನ್ನ ಹಿಂದಿದೆ. ದ್ವೇಷಾಸೂಯೆ, ಹಗೆ ಸಾಧಿಸುವ ಸಮಯ ಅಲ್ಲ. ಪರಸ್ಪರ ಪ್ರೀತಿ-ಸೌಹಾರ್ದತೆಯಿಂದ ಬದುಕು ಧನ್ಯಗೊಳಿಸುವ ಪ್ರಯತ್ನ ಮಾಡಿ ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಕರೆ ನೀಡಿದರು. 

 ಬಕ್ರೀದ್ ಪ್ರಯುಕ್ತ ಭಾನುವಾರ ಮಸೀದಿಯಲ್ಲಿ ನಡೆದ ಈದ್ ನಮಾಝ್ ಹಾಗೂ ಖುತುಬಾಕ್ಕೆ ನೇತೃತ್ವ ನೀಡಿದ ಬಳಿಕ ಸಂದೇಶ ನೀಡಿದ ಅವರು, ಮನುಷ್ಯನ ಆರೋಗ್ಯ ಇರುವ ಸಂದರ್ಭದಲ್ಲಿ ಭಗವಂತ ದಯಪಾಲಿಸಿದ ಅನುಗ್ರಹಗಳನ್ನು ತಮ್ಮ ಅಭಿಮಾನದ ಜೀವನದ ಜೊತೆಗೆ ಇತರರ ಸಂತೋಷಕ್ಕಾಗಿ ಒಂದಷ್ಟು ವ್ಯಯಿಸಿದಾಗ ಜೀವನ ಧನ್ಯಗೊಳ್ಳುತ್ತದೆ ಎಂದರು. 

 ಸಾಕಷ್ಟು ಆರೋಗ್ಯ ಸಂಪತ್ತು ಎಲ್ಲವೂ ಇದ್ದರೂ ಹಲವು ಮಂದಿ ಹಠಾತ್ ನಿಧನದ ಮೂಲಕ ಇಹಲೋಕಕ್ಕೆ ಶಾಶ್ವತ ವಿದಾಯ ಕೋರುತ್ತಾರೆ. ಅದೇ ಸಂದರ್ಭ ಹಲವು ಸಮಯಗಳಿಂದ ರೋಗ ಶಯ್ಯೆಯಯಲ್ಲಿದ್ದು, ಈಗಲೋ-ಆಗಲೋ ಎಂದು ಮರಣವನ್ನು ಎದುರು‌ ನೋಡುತ್ತಿರುವ ಅದೆಷ್ಟೋ ಮಂದಿ ವರ್ಷಾನುಗಟ್ಟಲೆ ಮಲಗಿದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದೆಲ್ಲವೂ ಬುದ್ದಿ ಇರುವ ಮನುಷ್ಯರಿಗೆ ಪಾಠವಾಗಿದೆ. ದಿನದಿಂದ ದಿನಕ್ಕೆ ಮರಣಾಧಿಕ್ಯಗೊಳ್ಳುವ ಕಾಲಘಟ್ಟದಲ್ಲಿ ಕೇವಲ ಮರಣ ನೋಡಿ ಹಿಂತಿರುಗುವ ಬದಲು ನನ್ನ ಮರಣವೂ ಅತೀ ಹತ್ತಿರದಲ್ಲಿದೆ ಎಂಬ ಸತ್ಯ ಅರಿತುಕೊಂಡು ಭಗವಂತನೆಡೆಗೆ ಮನಸ್ಸನ್ನು ಬಂಧಿಸಬೇಕಾದ ಅನಿವಾರ್ಯತೆ ಇದೆ ಎಂದು ಬಿ ಎಚ್ ಉಸ್ತಾದ್ ತಾಕೀತು ಮಾಡಿದರು. 

 ಸಾಮೂಹಿಕ ಪ್ರಾರ್ಥನೆ ಬಳಿಕ ಜಮಾಅತರು ಪರಸ್ಪರ ಈದ್ ಶುಭಾಶಯ ಹಂಚಿಕೊಂಡರು.

  • Blogger Comments
  • Facebook Comments

0 comments:

Post a Comment

Item Reviewed: ಮರಣ ಬೆನ್ನ ಹಿಂದಿದೆ, ದ್ಬೇಷಾಸೂಯೆ ಸಾಧಿಸುವ ಸಮಯ ಇದಲ್ಲ : ಬಿ ಎಚ್ ಉಸ್ತಾದ್ ಬಕ್ರೀದ್ ಸಂದೇಶ Rating: 5 Reviewed By: karavali Times
Scroll to Top