ಜನರ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಂಡ ಡಬ್ಬಲ್ ಎಂಜಿನ್ ಸರಕಾರಗಳ ವಿರುದ್ದ ಮಹಿಳೆಯರೇ ಬೀದಿಗೆ ಬಂದಿದ್ದಾರೆ : ರಮಾನಾಥ ರೈ - Karavali Times ಜನರ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಂಡ ಡಬ್ಬಲ್ ಎಂಜಿನ್ ಸರಕಾರಗಳ ವಿರುದ್ದ ಮಹಿಳೆಯರೇ ಬೀದಿಗೆ ಬಂದಿದ್ದಾರೆ : ರಮಾನಾಥ ರೈ - Karavali Times

728x90

26 July 2022

ಜನರ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಂಡ ಡಬ್ಬಲ್ ಎಂಜಿನ್ ಸರಕಾರಗಳ ವಿರುದ್ದ ಮಹಿಳೆಯರೇ ಬೀದಿಗೆ ಬಂದಿದ್ದಾರೆ : ರಮಾನಾಥ ರೈ

ಬಂಟ್ವಾಳ, ಜುಲೈ 26, 2022 (ಕರಾವಳಿ ಟೈಮ್ಸ್) : ಬಿಜೆಪಿ ನೇತೃತ್ವದ ಡಬ್ಬಲ್ ಎಂಜಿನ್ ಸರಕಾರಗಳು ನಿರಂತರವಾಗಿ ಬೆಲೆ ಏರಿಕೆ, ದುಬಾರಿ ತೆರಿಗೆ ವಿಧಿಸುವುದು ಸೇರಿದಂತೆ ಜನವಿರೋಧಿ ನೀತಿಗಳನ್ನೇ ನೆಚ್ಚಿಕೊಂಡು ಆಡಳಿತ ನಡೆಸುತ್ತಿದ್ದು, ಈ ಬಗ್ಗೆ ಜನ ಮೌನವಾಗಿದ್ದಾರೆ ಎಂಬುದನ್ನು ದೌರ್ಬಲ್ಯ ಎಂದು ಬಿಜೆಪಿ ನಾಯಕರು ಹಾಗೂ ಸರಕಾರಗಳು ತಿಳಿದುಕೊಂಡಂತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. 

ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಂಗಳವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಗತ್ಯ ದಿನಬಳಕೆ ಜೀವನಾಶ್ಯಕ ವಸ್ತುಗಳ ಮೇಲೂ ತೆರಿಗೆ ವಿಧಿಸುವ ಮೂಲಕ ಸಾಮಾನ್ಯ ಬಡ ಜನರ ಬದುಕಿನೊಂದಿಗೆ ಬಿಜೆಪಿ ಸರಕಾರ ಚೆಲ್ಲಾಟವಾಡುತ್ತಿದೆ. ಸರಕಾರದ ಲಯ ತಪ್ಪಿದ ನೀತಿಗಳಿಂದಾಗಿ ಮನುಷ್ಯ ಬದುಕುವುದೇ ಕಷ್ಟಕರವಾಗಿದೆ. ಡಬಲ್ ಎಂಜಿನ್ ಸರಕಾರ ಜನರ ಕಷ್ಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಾಂಗ್ರೆಸ್ ಸರಕಾರ ಮಾಡಿದ ಎಲ್ಲ ಜನಪರ ಯೋಜನೆಗಳೂ ಕೂಡಾ ಬಿಜೆಪಿ ಸರಕಾರದ ತಪ್ಪು ನೀತಿಗಳು ನುಂಗಿ ಹಾಕಿದ್ದು, ಜನರ ಬದುಕುವ ಹಕ್ಕಿನ ಮೇಲೆ ಪ್ರಹಾರ ನಡೆಸಿದಂತಿದೆ. ಈ ಸರಕಾರದ ನೀತಿಗಳಿಂದ ಮಹಿಳೆಯರು ಅತೀ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ಮಹಿಳೆಯರೇ ಇದೀಗ ಬೀದಿಗಿಳಿದು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ ಎಂದರು. 

ಪಕ್ಷ ಪ್ರಮುಖರಾದ  ಜಯಂತಿ ವಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಮಮತಾ ಡಿ ಎಸ್ ಗಟ್ಟಿ, ಶಾಲೆಟ್ ಪಿಂಟೋ, ಮಲ್ಲಿಕಾ ಶೆಟ್ಟಿ, ಜಾಸ್ಮಿನ್ ಡಿ’ಸೋಜ, ಐಡಾ ಸುರೇಶ್, ಮಂಜುಳಾ ಕುಶಲ ಪೆರಾಜೆ, ಸಪ್ನಾ ವಿಶ್ವನಾಥ, ಧನಲಕ್ಮೀ ಸಿ ಬಂಗೇರ, ಪೆÇ್ಲೀಸಿ ಡಿ’ಸೋಜ, ನಸೀಮಾ, ಅಸ್ಮಾ ಅಝೀಜ್, ಜೆಸಿಂತಾ ಡಿಸೋಜ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಲೋಲಾಕ್ಷ ಶೆಟ್ಟಿ ವೆಂಕಪ್ಪ ಪೂಜಾರಿ, ಪ್ರಶಾಂತ್ ಕುಲಾಲ್, ರೋಶನ್ ರೈ, ಸದಾನಂದ ಶೆಟ್ಟಿ, ಗಂಗಾದರ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಜನರ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಂಡ ಡಬ್ಬಲ್ ಎಂಜಿನ್ ಸರಕಾರಗಳ ವಿರುದ್ದ ಮಹಿಳೆಯರೇ ಬೀದಿಗೆ ಬಂದಿದ್ದಾರೆ : ರಮಾನಾಥ ರೈ Rating: 5 Reviewed By: karavali Times
Scroll to Top