ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ : ವಿಜ್ಞಾಪನಾ ಪತ್ರ ಬಿಡುಗಡೆ - Karavali Times ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ : ವಿಜ್ಞಾಪನಾ ಪತ್ರ ಬಿಡುಗಡೆ - Karavali Times

728x90

21 July 2022

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ : ವಿಜ್ಞಾಪನಾ ಪತ್ರ ಬಿಡುಗಡೆ

ಉಡುಪಿ, ಜುಲೈ 21, 2022 (ಕರಾವಳಿ ಟೈಮ್ಸ್) : ಜಿಲ್ಲೆಯ ತುಳುನಾಡ ರಕ್ಷಣಾ ವೇದಿಕೆಯು ಕಳೆದ 13 ವರ್ಷಗಳಲ್ಲಿ ಹಲವಾರು ಜನಪರ ಕೆಲಸ-ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷ ರೋಹಿತ್ ಕರಂಬಳ್ಳಿ ಅವರ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ವಿಜ್ಞಾಪನಾ ಪತ್ರವನ್ನು ಜೈನ ದಿಗಂಬರ ಮಠ ಮೂಡುಬಿದಿರೆ ಜಗದ್ಗುರು ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪುÅ್ಪ, ಕೇಂದ್ರೀಯ ಕಛೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝರುದ್ದೀನ್ ಸುಬ್ರಹ್ಮಣ್ಯ ನಗರ,  ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಸದಾನಂದ್ ಜಿ. ಪುತ್ರನ್, ಗಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಆಟಿಡೊಂಜಿ ದಿನ ಕಾರ್ಯಕ್ರಮವು ಆಗಸ್ಟ್ 14 ರಂದು ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶಾಲಾ ಹಾಗೂ ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ (ನೃತ್ಯ, ಸಂಗೀತ ಕಾಂಪಿಟೇಷನ್) ನಡೆಯಲಿದ್ದು, ಮದ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. 1 ಗಂಟೆಗೆ ಆಟಿದ ಉನಸ್ ಏರ್ಪಡಿಸಲಾಗಿದ್ದು, ಮದ್ಯಾಹ್ನ 2 ಗಂಟೆಗೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ರಕ್ಷಣಾ ವೇದಿಕೆ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ : ವಿಜ್ಞಾಪನಾ ಪತ್ರ ಬಿಡುಗಡೆ Rating: 5 Reviewed By: karavali Times
Scroll to Top