ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಂಬಂಧಿಕ ವಿದ್ಯಾರ್ಥಿಗಳ ದಾರುಣ ಸಾವು - Karavali Times ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಂಬಂಧಿಕ ವಿದ್ಯಾರ್ಥಿಗಳ ದಾರುಣ ಸಾವು - Karavali Times

728x90

29 August 2022

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಂಬಂಧಿಕ ವಿದ್ಯಾರ್ಥಿಗಳ ದಾರುಣ ಸಾವು

ಉಪ್ಪಿನಂಗಡಿ, ಆಗಸ್ಟ್ 29, 2022 (ಕರಾವಳಿ ಟೈಮ್ಸ್) : ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಪರಸ್ಪರ ಸಂಬಂಧಿಕರಾದ ಕಾಲೇಜು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. 

ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ, ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿ ಮುಹಮ್ಮದ್ ಶಫೀಕ್ (20) ಅವರು ಸೋಮವಾರ ಬೆಳಿಗ್ಗೆ ಮನೆಯಿಂದ ಬೈಕಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಪೂಂಜಾಲಕಟ್ಟೆಯಲ್ಲಿ ಇನ್ನೊಂದು ಬೈಕ್ ಡಿಕ್ಕಿಯಾದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದವರು ಮಡಂತ್ಯಾರಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವವರಾಗಿದ್ದು ಎನ್ನಲಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ಸದ್ರಿ ಶಫೀಕ್ ಅಪಘಾತದಲ್ಲಿ ಮೃತಪಟ್ಟು ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿದೆ ಎಂಬ ಸುದ್ದಿ ತಿಳಿದು ಸಂಬಂಧಿಕ ವಿದ್ಯಾರ್ಥಿ ಕಕ್ಕೆಪದವು ನಿವಾಸಿ, ತುಂಬೆ ಐಟಿಐ ವಿದ್ಯಾರ್ಥಿ ಮುಹಮ್ಮದ್ ಸಫ್ವಾನ್ (20) ಬೈಕಿನಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿಯಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟಿದ್ದಾರೆ. 

ಇಬ್ಬರು ಸಂಬಂಧಿಕ ವಿದ್ಯಾರ್ಥಿಗಳ ದಾರುಣ ಮರಣದಿಂದ ಕುಟುಂಬಿಕರು ಹಾಗೂ ಬಂಧು-ಬಳಗ, ಸ್ನೇಹಿತರು ಅತೀವ ದುಃಖಿತರಾಗಿದ್ದು, ಊರಿಗೆ ಊರೇ ಸ್ಮಶಾನ ಮೌನಕ್ಕೆ ಶರಣಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಂಬಂಧಿಕ ವಿದ್ಯಾರ್ಥಿಗಳ ದಾರುಣ ಸಾವು Rating: 5 Reviewed By: karavali Times
Scroll to Top