ಕಡಬ : ಅಪ್ರಾಪ್ತ ಬಾಲಕಿ ಅತ್ಯಾಚಾರಗೈದ ಮಾವ ರುಕ್ಮಯ್ಯ ಅರೆಸ್ಟ್ - Karavali Times ಕಡಬ : ಅಪ್ರಾಪ್ತ ಬಾಲಕಿ ಅತ್ಯಾಚಾರಗೈದ ಮಾವ ರುಕ್ಮಯ್ಯ ಅರೆಸ್ಟ್ - Karavali Times

728x90

13 September 2022

ಕಡಬ : ಅಪ್ರಾಪ್ತ ಬಾಲಕಿ ಅತ್ಯಾಚಾರಗೈದ ಮಾವ ರುಕ್ಮಯ್ಯ ಅರೆಸ್ಟ್

ಕಡಬ, ಸೆಪ್ಟೆಂಬರ್ 13, 2022 (ಕರಾವಳಿ ಟೈಮ್ಸ್) : 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಮಾವ ರುಕ್ಮಯ್ಯ (31) ಎಂಬಾತ ಅತ್ಯಾಚಾರ ನಡೆಸಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಲಕಿ ತನ್ನ ತಂದೆ ತಾಯಿಯವರೊಂದಿಗೆ ವಾಸವಾಗಿದ್ದು 9ನೇ ತರಗತಿ ವಿದ್ಯಾಬ್ಯಾಸ ಮಾಡಿ ಮನೆಯಲ್ಲಿದ್ದಳು. ಬಾಲಕಿಯ ತಂದೆಯ ತಂಗಿ ನಾಗವೇಣಿ ಎಂಬವರನ್ನು ಕಡಬ ತಾಲೂಕು ಕೊಂಬಾರು ಗ್ರಾಮದ ನಿವಾಸಿಯಾದ ರುಕ್ಮಯ್ಯ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 5 ಜನ ಮಕ್ಕಳಿದ್ದಾರೆ. ಬಾಲಕಿ ಸುಮಾರು 3 ವರ್ಷಗಳ ಹಿಂದೆ ನಾಗವೇಣಿ ಅವರ ಮಕ್ಕಳನ್ನು ನೊಡಿಕೊಳ್ಳಲು ಅವರ ಮನೆಗೆ ಹೋಗಿರುತ್ತಾರೆ. 

ಮನೆಯಲ್ಲಿದ್ದ ಬಾಲಕಿಯನ್ನು ಆರೋಪಿ ಮಾವ ರುಕ್ಮಯ್ಯ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಒಂದು ದಿನ ಬಲವಂತವಾಗಿ ಮನೆಯಲ್ಲಿ ಎಲ್ಲರೂ ಮಲಗಿದ ಸಮಯ ಮನೆಯ ಹಾಲ್ ಪಕ್ಕದಲ್ಲಿರುವ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ರೂಮಿನ ಹಾಸಿಗೆ ಮೇಲೆ ಮಲಗಿಸಿ ಪಿರ್ಯಾದುದಾರರ ಬಟ್ಟೆಗಳನ್ನು ತೆಗೆದು ಲೈಂಗಿಕ ಕ್ರಿಯೆ ಮಾಡಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳಬೇಡ. ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನೀನು ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ನಿನ್ನನ್ನು ಮನೆಯಿಂದ ಓಡಿಸಿ ಬಿಡುತ್ತೇನೆ ಎಂದು ಬೆದರಿಸಿರುತ್ತಾನೆ. ಮನೆಯಿಂದ ಹೋಗಬೇಕಾಗುತ್ತದೆ ಎಂದು ಹೆದರಿ ಬಾಲಕಿ ತನ್ನ ಮಾವ ರುಕ್ಮಯ್ಯ ಎಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳಿರುವುದಿಲ್ಲ. 

ಬಾಲಕಿಯ ಅಸಹಾಯಕತೆಯನ್ನೇ ಬಳಸಿಕೊಂಡ ಆರೋಪಿ ಮಾವ ರುಕ್ಮಯ್ಯ ನಾಲ್ಕೈದು ಬಾರಿ ಬೆದರಿಸಿ ಲೈಂಗಿಕವಾಗಿ ಬಳಸಿಕೊಂಡಿರುತ್ತಾನೆ. ಸೆ 9 ರಂದು ಕೊಂಬಾರು ಗ್ರಾಮಕ್ಕೆ ಬರುವ ಆಶಾ ಕಾರ್ಯಕರ್ತೆ ಸುನಿತಾ ಎಂಬವರು ಬಾಲಕಿಯ ಹೊಟ್ಟೆಯನ್ನು ನೋಡಿ ಎಷ್ಟು ತಿಂಗಳು ಎಂದು ಕೇಳಿ ವಿಚಾರಿಸಿದ್ದು, ಈ ಸಂದರ್ಭ ಬಾಲಕಿ ಆಶಾಕಾರ್ಯಕರ್ತೆಗೆ ತನ್ನ ಮಾವನಿಂದ ಆಗಿರುವ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. 

ಈ ಸಂದರ್ಭ ಆಶಾ ಕಾರ್ಯಕರ್ತೆ ಸುನಿತಾ ಅವರು ಪ್ರಗ್ನೆನ್ಸಿ ಟೆಸ್ಟ್ ಕಿಟ್ ತೆಗೆದುಕೊಂಡು ಟೆಸ್ಟ್ ಮಾಡಿದಾಗ ಪಿರ್ಯಾದುದಾರರು  ಗರ್ಬಿಣಿಯಾಗಿರುವುದು ತಿಳಿದು ಬಂದಿದೆ. ಬಳಿಕ ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಈ ಬಗ್ಗೆ ಕಡದ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2022 ಕಲಂ 5(ಜೆ) 2,6 ಪೋಕ್ಸೋ ಕಾಯಿದೆ ಸೆಕ್ಷನ್ 346(2)(ಎಫ್), 376(2)(ಎನ್), 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆರೋಪಿ ರುಕ್ಮಯ್ಯನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಅಪ್ರಾಪ್ತ ಬಾಲಕಿ ಅತ್ಯಾಚಾರಗೈದ ಮಾವ ರುಕ್ಮಯ್ಯ ಅರೆಸ್ಟ್ Rating: 5 Reviewed By: karavali Times
Scroll to Top