ಸುಳ್ಯ : ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಆರೋಪಿ ತೀರ್ಥಪ್ರಸಾದ್ ಅರೆಸ್ಟ್ - Karavali Times ಸುಳ್ಯ : ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಆರೋಪಿ ತೀರ್ಥಪ್ರಸಾದ್ ಅರೆಸ್ಟ್ - Karavali Times

728x90

27 September 2022

ಸುಳ್ಯ : ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಆರೋಪಿ ತೀರ್ಥಪ್ರಸಾದ್ ಅರೆಸ್ಟ್

ಸುಳ್ಯ, ಸೆಪ್ಟೆಂಬರ್ 27, 2022 (ಕರಾವಳಿ ಟೈಮ್ಸ್) : ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಗರ್ಭವತಿ ನಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತೀರ್ಥಪ್ರಸಾದ್ (25) ಎಂಬಾತನ ವಿರುದ್ದ ಸುಳ್ಯ ಠಾಣೆಯಲ್ಲಿ ಸೋಮವಾರ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಸಂತ್ರಸ್ತ ವಿದ್ಯಾರ್ಥಿನಿ ಸುಳ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಜೂನ್ 26 ರಂದು ಪ್ರಕರಣ ನಡೆದಿದೆ. ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿನಿ ಪದೇ ಪದೇ ಹೊಟ್ಟೆ ನೋವು ಆಗುತ್ತಿರುವುದಾಗಿ ಹೇಳುತಿದ್ದವಳನ್ನು ಸೆ 26 ರಂದು ಹೆತ್ತವರು ಸುಳ್ಯ ತಾಲೂಕು ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಸ್ಕ್ಯಾನಿಂಗ್  ಮಾಡಿಸಿಕೊಂಡು ಬರುವಂತೆ ಸೂಚಿಸಿದ ಪ್ರಕಾರ ಸರಕಾರಿ ಆಸ್ವತ್ರೆಯ ಬಳಿ ಸ್ಕ್ಯಾನಿಂಗ್ ಮಾಡಿಸಿ ವರದಿಯನ್ನು ಹಾಜರುಪಡಿಸಿದಾಗ ವೈದ್ಯರು ಸ್ಕ್ಯಾನಿಂಗ್‍ನ್ನು ಪರಿಶೀಲನೆ ಮಾಡಿ ಬಾಲಕಿ ಗರ್ಭವತಿಯಾಗಿರುತ್ತಾಳೆಂದು ತಿಳಿಸಿರುತ್ತಾರೆ. 

ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಕಳೆದ 4 ತಿಂಗಳ ಹಿಂದೆ ಮರಾಠಿ ನಾಯ್ಕ ವಾಟ್ಸ್ ಆಪ್ ಗ್ರೂಪ್‍ನಲ್ಲಿ ಉಬರಡ್ಕದ ಸುಮಾರು 25 ವರ್ಷದ ತೀರ್ಥಪ್ರಸಾದ್ ಎಂಬವನ ಪರಿಚಯವಾಗಿರುತ್ತದೆ. ಬಳಿಕ ಆರೋಪಿ ಬಾಲಕಿಗೆ ಕರೆ ಮಾಡಿ ಮಾತನಾಡುತ್ತಿದ್ದು, ಜೂನ್ 30 ರಂದು ಆರೋಪಿ ತೀರ್ಥ ಪ್ರಸಾದ್ ಬಾಲಕಿಯನ್ನು ಮಾತನಾಡಲಿಕ್ಕಿದೆ ಎಂದು ಸುಳ್ಯಕ್ಕೆ ಕರೆಸಿ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ಬಂದ ತೀರ್ಥಪ್ರಸಾದ್ ತನ್ನ ಮೋಟಾರ್ ಸೈಕಲ್‍ನಲ್ಲಿ ಬಾಲಕಿಯನ್ನು ಕರೆದುಕೊಂಡು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜ್ಯೂನಿಯರ್ ಕಾಲೇಜು ಬಳಿ ಇರುವ ತನ್ನ ಸ್ನೇಹಿತನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುತ್ತಾನೆ ಎಂದು ತಿಳಿಸಿದ್ದಾಳೆ. 

ಈ ಬಗ್ಗೆ ಬಾಲಕಿಯ ಪೋಷಕರು ಸುಳ್ಯ ಠಾಣೆಗೆ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 110/2022 ಕಲಂ 376 ಐಪಿಸಿ ಮತ್ತು ಸೆಕ್ಷನ್ 4, ಪೋಕ್ಸೋ ಕಾಯಿದೆ 2012 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ತೀರ್ಥಪ್ರಸಾದನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಆರೋಪಿ ತೀರ್ಥಪ್ರಸಾದ್ ಅರೆಸ್ಟ್ Rating: 5 Reviewed By: karavali Times
Scroll to Top