ಬಂಟ್ವಾಳ, ನವೆಂಬರ್ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ಗಣೇಶ ಆದಿದ್ರಾವಿಡ ಅವರ ಪುತ್ರ ಕಾರ್ತಿಕ್ (16) ಎಂಬಾತನ ಸಿಡಿಲಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಮನೆ ಮಂದಿ ಊಟ ಮುಗಿಸಿ ಮಲಗಿದ್ದು, ಸುಮಾರು 9.30ರ ಸುಮಾರಿಗೆ ಸಿಡಿಲು ಸಹಿತ ಭಾರೀ ಮಳೆ ಬಂದು ಮನೆಯಲ್ಲಿ ಮಲಗಿದ್ದವರಿಗೆ ವಿದ್ಯುತ್ ಶಾಕ್ ಅನುಭವವಾಗಿದೆ. ಈ ವೇಳೆ ಮನೆ ಮಂದಿ ಮಲಗಿದಲ್ಲಿಂದ ಎದ್ದು ಹೊರಗೆ ಓಡಿದ್ದಾರೆ. ಆದರೆ ಬಾಲಕ ಕಾರ್ತಿಕ್ ಮಾತ್ರ ಮಲಗಿದಲ್ಲಿಂದ ಎದ್ದೇಳಲಿಲ್ಲ. ತಕ್ಷಣ ಆತನನ್ನು ಮನೆಮಂದಿ ಕ್ಲಿನಿಕಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
0 comments:
Post a Comment