ಮಂಗಳೂರು, ನವೆಂಬರ್ 30, 2022 (ಕರಾವಳಿ ಟೈಮ್ಸ್) : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಸಭೆಯು ಮಂಗಳವಾರ (ನ 29) ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವುದರ ಜೊತೆಗೆ ಅವರ ಕಷ್ಟ-ಸುಖಗಳಲ್ಲಿ ನಾವು ಸದಾ ಭಾಗಿಗಳಾಗಬೇಕು. ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅವರಿಗೆ ಸಕಾಲಿಕ ಮಾಹಿತಿ ನೀಡುವುದರ ಮೂಲಕ ಪಕ್ಷ ಸಂಘಟಿಸುವ ಕೆಲಸ ಆಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಆನಂದ ಸುರತ್ಕಲ್ ವಹಿಸಿ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಉಸ್ತುವಾರಿ ಇಸ್ಮಾಯಿಲ್ ನಾಟೆಕಲ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಘಟಕದ ಮುಖ್ಯಸ್ಥರಾದ ನಿರಂಜನ್ ರೈ, ಹರ್ಷದ್ ಕುಕ್ಕಿಲ, ಜಿಲ್ಲಾ ಪದಾಧಿಕಾರಿಗಳಾದ ಬಶೀರ್ ಅಹ್ಮದ್, ಜ್ಞಾನಶೀಲ ಸುಳ್ಯ, ಯೋಗೀಶ್ ನಾಯಕ್, ನಿಯಾಝ್ ಫಜೀರ್, ಇಸ್ಮಾಯಿಲ್ ಮೋರ್ಲ, ಐಬರ್ಟ್ ಸಲ್ದಾನಾ, ಪದಾಧಿಕಾರಿಗಳಾದ ಲಕ್ಷ್ಮಣ್ ಶೆಟ್ಟಿ, ಭರತ್ ರಾಜ್, ರಶೀದ್, ಹನೀಫ್, ಇನಾಸ್, ರವೀಂದ್ರ, ಜಯಪ್ರಕಾಶ್, ಕರೀಂ, ಸುರೇಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment