ಬಂಟ್ವಾಳ, ಡಿಸೆಂಬರ್ 9, 2022 (ಕರಾವಳಿ ಟೈಮ್ಸ್) : ಯುವ ವಕೀಲ ಕುಲ್ ದೀಪ್ ಶೆಟ್ಟಿಯವರನ್ನು ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ರಾಜ್ಯಾದ್ಯಂತ ವಕೀಲರ ಸಂಘಟನೆಗಳು ಬೀದಿಗಿಳಿದ ಹಿನ್ನಲೆಯಲ್ಲಿ ಕೊನೆಗೂ ಎಚ್ಚೆತ್ತ ಸರಕಾರ ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ಪಿಎಸೈ ಸುತೇಶ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿ ವೇಳೆ ವಕೀಲರ ಮನೆಗೆ ನುಗ್ಗಿ ರಾದ್ದಾಂತ ಎಬ್ಬಿಸಿ ಬಂಧಿಸಿದ ಆರೋಪ ಎಸ್ಸೈ ಸುತೇಶ್ ಹಾಗೂ ಪೆÇಲೀಸರ ಮೇಲೆ ಮಾಡಲಾಗಿತ್ತು. ಈ ಬಗ್ಗೆ ವೀಡಿಯೋ ಕೂಡಾ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘಟನೆಗಳು ರಾಜ್ಯ ವಿವಿಧೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು.
ರಾಜ್ಯದ ಮಂಗಳೂರು, ಬಂಟ್ವಾಳ, ಶಿವಮೊಗ್ಗ, ಹಾಸನ, ಸಕಲೇಶಪುರ, ಪುತ್ತೂರು ಮೊದಲಾದೆಡೆ ವಕೀಲರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿತ್ತು.
ಪ್ರಕರಣವನ್ನು ಇದೀಗ ಗಂಭೀರವಾಗಿ ಪರಿಗಣಿಸಿದ ಸರಕಾರಿ ಆಡಳಿತ ಕರ್ತವ್ಯ ಲೋಪದ ಕಾರಣ ನೀಡಿ ಎಸ್ಸೈ ಸುತೇಶ್ ಅವರನ್ನು ವರ್ಗಾವಣೆಗೊಳಿಸಿ ಅದೇಶಿಸಿದೆ. ಎಸ್ಸೈ ಸುತೇಶ್ ಅವರನ್ನು ಇದೀಗ ಮಂಗಳೂರು ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿ ಮಾಡಲಾಗಿದೆ. ಸದ್ಯ ಉಪ್ಪಿನಂಗಡಿ ಪಿಎಸ್ಸೈ ನಂದಕುಮಾರ್ ಅವರಿಗೆ ಪೂಂಜಾಲಕಟ್ಟೆ ಠಾಣಾ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗಿದೆ.
0 comments:
Post a Comment