ಬಂಟ್ವಾಳ, ಜನವರಿ 03, 2023 (ಕರಾವಳಿ ಟೈಮ್ಸ್) : ದೇಶದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ದೃಷ್ಟಿಯಲ್ಲಿಕೊಂಡು ಜನ ಸಾಮಾನ್ಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ಉಂಟು ಮಾಡುವ ಹಾಗೂ ಜನರಿಗೆ ಆರ್ಥಿಕ ಸಹಕಾರ ಒದಗಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ ರಮಾನಾಥ ಅವರ ನೇತೃತ್ವದಲ್ಲಿ 2018-19ನೇ ಆರ್ಥಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನ ಬಿ ಸಿ ರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿ, ರಮಾನಾಥ ರೈ ಅಧ್ಯಕ್ಷ ಹಾಗೂ ಮಾಯಿಲಪ್ಪ ಸಾಲ್ಯಾನ್ ಉಪಾಧ್ಯಕ್ಷ ಸಹಿತ 13 ಮಂದಿ ನಿರ್ದೇಶಕರುಗಳನ್ನೊಳಗೊಂಡಂತೆ ಆರಂಭಿಸಲಾದ ಹಣಕಾಸು ಸಂಸ್ಥೆ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ 3ನೇ ಶಾಖೆಯಾಗಿ ನೂತನ ಲೊರೆಟ್ಟೊ ಶಾಖೆಯು ಬಂಟ್ವಾಳ-ಲೊರೆಟ್ಟೊಪದವಿನ ಗ್ರೇಸ್ ವಾಣಿಜ್ಯ ಸಂಕೀರ್ಣದಲ್ಲಿ ಜನವರಿ 5 ರಂದು ಗುರುವಾರ ಬೆಳಿಗ್ಗೆ 10:35ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಶಾಖೆಯನ್ನು ಉದ್ಘಾಟಿಸಲಿದ್ದು, ಲೊರೆಟ್ಟೊ ಮಾತಾ ಚರ್ಚ್ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ಅವರು ಶಾಖೆಯ ನಗದು ಕೌಂಟರ್ ಉದ್ಘಾಟಿಸಲಿದ್ದು, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಶಾಖೆಯ ಭದ್ರತಾ ಕೊಠಡಿಗೆ ಚಾಲನೆ ನೀಡುವರು. ಮಾಜಿ ಸಚಿವ ಬಿ ರಮಾನಾಥ ರೈ ಅವರು ಶಾಖೆಯ ಗಣಕೀಕರಣಕ್ಕೆ ಚಾಲನೆ ನೀಡುವರು ಎಂದು ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್ ತಿಳಿಸಿದ್ದಾರೆ.
ಬ್ಯಾಂಕಿನಲ್ಲಿ ನಿರ್ದೇಶಕರಾಗಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಎಂ ಎಸ್ ಮುಹಮ್ಮದ್, ಸುದರ್ಶನ್ ಜೈನ್, ಬಿ ಎಂ ಅಬ್ಬಾಸ್ ಅಲಿ, ವಾಣಿ ಪ್ರಕಾಶ್ ಕಾರಂತ, ಮಂಜುಳಾ ಕುಶಾಲಪ್ಪ ಗೌಡ, ಪಿಯೂಸ್ ಎಲ್ ರೋಡ್ರಿಗಸ್, ನಾರಾಯನ ನಾಯ್ಕ, ಅಲ್ಫೋನ್ಸ್ ಮೆನೇಜಸ್, ಅಮ್ಮು ಅರ್ಬಿಗುಡ್ಡೆ ಅವರಿದ್ದು, ಬ್ಯಾಂಕಿನ 2ನೇ ಶಾಖೆ ಈಗಾಗಲೇ ಮಾಣಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.
0 comments:
Post a Comment