ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ, ನಾಡಿನಲ್ಲಿ ಸೌಹಾರ್ದತೆ ಪುನರ್ ಸ್ಥಾಪನೆಗಾಗಿ ನಡೆಯುತ್ತಿರುವ ಭಾವೈಕ್ಯತಾ ಜಾಥಾ ಬಿ.ಸಿ.ರೋಡಿಗೆ ಆಗಮನ, ಬಹಿರಂಗ ಸಭೆ - Karavali Times ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ, ನಾಡಿನಲ್ಲಿ ಸೌಹಾರ್ದತೆ ಪುನರ್ ಸ್ಥಾಪನೆಗಾಗಿ ನಡೆಯುತ್ತಿರುವ ಭಾವೈಕ್ಯತಾ ಜಾಥಾ ಬಿ.ಸಿ.ರೋಡಿಗೆ ಆಗಮನ, ಬಹಿರಂಗ ಸಭೆ - Karavali Times

728x90

7 January 2023

ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ, ನಾಡಿನಲ್ಲಿ ಸೌಹಾರ್ದತೆ ಪುನರ್ ಸ್ಥಾಪನೆಗಾಗಿ ನಡೆಯುತ್ತಿರುವ ಭಾವೈಕ್ಯತಾ ಜಾಥಾ ಬಿ.ಸಿ.ರೋಡಿಗೆ ಆಗಮನ, ಬಹಿರಂಗ ಸಭೆ

ಬಂಟ್ವಾಳ, ಜನವರಿ 07, 2023 (ಕರಾವಳಿ ಟೈಮ್ಸ್) : ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಭಾವಕೈತಾ ಜಾಥಾವು ಶನಿವಾರ ಬಿ ಸಿ ರೋಡಿಗೆ ಆಗಮಿಸಿತು. 


ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ನಾಡಿನಲ್ಲಿ ಸೌಹಾರ್ದತೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.


ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ಜಾಥಾದ ಬಹಿರಂಗ ಸಭೆಯ ಅದ್ಯಕ್ಷತೆ ವಹಿಸಿದ್ದರು. ಜೆ ಸಿ ಟಿ ಯು ರಾಜ್ಯ ಸಂಚಾಲಕ ಕೆ ವಿ ಭಟ್, ಕರ್ನಾಟಕ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ರವಿ ಕಿರಣ್ ಪುಣಚ, ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ಅಮಾನುಲ್ಲಾ ಖಾನ್, ಎ ಐ ಟಿ ಯು ಸಿ ಜಿಲ್ಲಾ ಉಪಾದ್ಯಕ್ಷ ಬಿ ಶೇಖರ್, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಎ ಐ ಕೆ ಕೆ ಎಂ ಎಸ್ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಸಭೆಯಲ್ಲಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಅದ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ರಾಜ್ಯ ರೈತ ಸಂಘ ಯುವ ಘಟಕದ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ ರಾವ್ ಕೊಲ್ಲಾಜೆ, ಗೌರವಾದ್ಯಕ್ಷ ಸುರೇಂದ್ರ ಕೋರ್ಯ, ಎಐಟಿಯುಸಿ ಮುಖಂಡರಾದ ಸುರೇಶ್ ಕುಮಾರ್ ಬಂಟ್ವಾಳ, ರೈತ ಸಂಘದ ಮೋನಪ್ಪ ಗೌಡ ಪೆರ್ನೆ, ಸದಾನಂದ ಶೀತಲ್, ಸುರೇಂದ್ರ ಕೋಟ್ಯಾನ್, ಎ ಐ ವೈ ಎಫ್ ಮುಖಂಡರಾದ ಶ್ರೀನಿವಾಸ್ ಭಂಡಾರಿ, ಪ್ರೇಮನಾಥ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಜಾಥವು ಮಂಗಳೂರಿನಲ್ಲಿ ಉದ್ಘಾಟನೆಗೊಂಡು ಜನವರಿ 11 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಸಮಾರೋಪಗೊಳ್ಳಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ, ನಾಡಿನಲ್ಲಿ ಸೌಹಾರ್ದತೆ ಪುನರ್ ಸ್ಥಾಪನೆಗಾಗಿ ನಡೆಯುತ್ತಿರುವ ಭಾವೈಕ್ಯತಾ ಜಾಥಾ ಬಿ.ಸಿ.ರೋಡಿಗೆ ಆಗಮನ, ಬಹಿರಂಗ ಸಭೆ Rating: 5 Reviewed By: karavali Times
Scroll to Top