ಬೋಳಂಗಡಿ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಪ್ರಕರಣ : ಆರೋಪಿ ಬಾಳ್ತಿಲ ಮಂಜುನಾಥ ಭೋವಿ ಬಂಧನ - Karavali Times ಬೋಳಂಗಡಿ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಪ್ರಕರಣ : ಆರೋಪಿ ಬಾಳ್ತಿಲ ಮಂಜುನಾಥ ಭೋವಿ ಬಂಧನ - Karavali Times

728x90

1 January 2023

ಬೋಳಂಗಡಿ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಪ್ರಕರಣ : ಆರೋಪಿ ಬಾಳ್ತಿಲ ಮಂಜುನಾಥ ಭೋವಿ ಬಂಧನ

ಬಂಟ್ವಾಳ, ಜನವರಿ 01, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಐವನ್ ಥೋರಸ್ ಎಂಬವರ ಮನೆಯಲ್ಲಿ ಡಿ 24 ರಿಂದ 29 ರ ಸಂಜೆಯ ಮಧ್ಯೆ ನಡೆದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ 30 ರಂದು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣ ಬೇಧಿಸಿದ ನಗರ ಪೊಲೀಸರು ಆರೋಪಿ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ನಾಗರಾಜ ಭೋವಿ ಅವರ ಪುತ್ರ ಮಂಜುನಾಥ ನಾಗರಾಜ್ ಭೋವಿ (50) ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.


ಐವನ್ ತೋರಸ್ ಅವರು ತನ್ನ ಅಡಿಕೆ ತೋಟದ ಮಧ್ಯೆ ಇರುವ ಅಂಗಳದಲ್ಲಿ ಒಣಗಲು ಹಾಕಿದ್ದ 100-120 ಕೆ ಜಿ ಅಡಿಕೆಯನ್ನು ಕಳ್ಳರು ಡಿ 24 ರ ಸಂಜೆ 6 ರಿಂದ ಡಿ 29 ರ ಸಂಜೆ 6.30 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿತ್ತಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2022 ಕಲಂ 379 ಐಪಿಸಿಯಂತೆ ಪ್ರಕರಣದ ದಾಖಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮಂಜುನಾಥ ನಾಗರಾಜ್ ಭೋವಿಯನ್ನು ಶುಕ್ರವಾರ ವಶಕ್ಕೆ ಪಡೆದು ಕಳವು ಮಾಡಿದ 105 ಕೆ ಜಿ ಅಡಿಕೆ, ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿ ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೆÇಲೀಸ್ ಠಾಣೆಗಳಲ್ಲಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಪ್ರಕರಣ : ಆರೋಪಿ ಬಾಳ್ತಿಲ ಮಂಜುನಾಥ ಭೋವಿ ಬಂಧನ Rating: 5 Reviewed By: karavali Times
Scroll to Top