ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ‘ಜ್ವಾಲಾ ನಾಯಿ’ ಕಿಡ್ನಿ ಸಮಸ್ಯೆಯಿಂದ ಮೃತ - Karavali Times ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ‘ಜ್ವಾಲಾ ನಾಯಿ’ ಕಿಡ್ನಿ ಸಮಸ್ಯೆಯಿಂದ ಮೃತ - Karavali Times

728x90

3 January 2023

ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ‘ಜ್ವಾಲಾ ನಾಯಿ’ ಕಿಡ್ನಿ ಸಮಸ್ಯೆಯಿಂದ ಮೃತ

ಮಂಗಳೂರು, ಜನವರಿ 04, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಅಪರಾಧ ಪತ್ತೆ ಕಾರ್ಯ ನಡೆಸುತ್ತಿದ್ದ ಜ್ವಾಲಾ ಎಂಬ ಶ್ವಾನ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಮಂಗಳವಾರ (ಡಿ 3) ಸಾವನ್ನಪ್ಪಿದೆ. 2015 ರ ಫೆಬ್ರವರಿ 27 ರಂದು ಜನಿಸಿದ್ದ ಜ್ವಾಲಾ ಡಾಬರ್‍ಮನ್ ಫಿಂಚರ್ ತಳಿಗೆ ಸೇರಿದ್ದು, 7 ವರ್ಷ 10 ತಿಂಗಳ ವಯಸ್ಸಿನಲ್ಲಿ ಕಿಡ್ನಿ ಸಂಬಂಧಿ ಸಮಸ್ಯೆಗೆ ತುತ್ತಾಗಿ ಮೃತಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ಸಿಬ್ಬಂದಿ ಕುಮಾರ ಕತ್ಲೇರಾ ಅವರು ಈ ಜ್ವಾಲಾ ಶ್ವಾನದ ನಿರ್ವಹಣೆ ಮಾಡುತ್ತಿದ್ದರು. ಮೃತ ಶ್ವಾನ ಜ್ವಾಲಾಕ್ಕೆ ಸಕಲ ಪೊಲೀಸ್ ಗೌರವಾದಿಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ‘ಜ್ವಾಲಾ ನಾಯಿ’ ಕಿಡ್ನಿ ಸಮಸ್ಯೆಯಿಂದ ಮೃತ Rating: 5 Reviewed By: karavali Times
Scroll to Top