ಉಪ್ಪಿನಂಗಡಿ : ಟಯರ್ ಮೌಲ್ಡ್ ಡಿಸ್ಕ್ ಸಿಡಿದು ವ್ಯಕ್ತಿ ದಾರುಣ ಸಾವು - Karavali Times ಉಪ್ಪಿನಂಗಡಿ : ಟಯರ್ ಮೌಲ್ಡ್ ಡಿಸ್ಕ್ ಸಿಡಿದು ವ್ಯಕ್ತಿ ದಾರುಣ ಸಾವು - Karavali Times

728x90

18 January 2023

ಉಪ್ಪಿನಂಗಡಿ : ಟಯರ್ ಮೌಲ್ಡ್ ಡಿಸ್ಕ್ ಸಿಡಿದು ವ್ಯಕ್ತಿ ದಾರುಣ ಸಾವು

ಉಪ್ಪಿನಂಗಡಿ, ಜನವರಿ 18, 2023 (ಕರಾವಳಿ ಟೈಮ್ಸ್) : ಟಯರ್ ರಿಸೋಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಟಯರ್ ಮೌಲ್ಡ್ ಡಿಸ್ಕ್ ಆಕಸ್ಮಿಕವಾಗಿ ಸಿಡಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಗಾಂಧಿ ಪಾರ್ಕ್ ಬಳಿಯ ಇಂಡಿಯನ್ ಟಯರ್ಸ್ ಶಾಪ್ ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. 


ಮೃತರನ್ನು ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ನಿವಾಸಿ ರಾಜೇಶ್ (46) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಬಾವ ಜಯಂತ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನನ್ನ ಬಾವ ರಾಜೇಶ್ ಅವರು ಮಂಗಳೂರಿನ ಹುಸೇನ್ ಎಂಬವರ ಜೊತೆ ಮಂಗಳೂರಿನ ಭಾರತ್ ಟಯರ್ಸ್ ಕಂಪೆನಿಯಲ್ಲಿ ಸುಮಾರು 17 ವರ್ಷಗಳ ಕಾಲ ಟಯರ್ ರಿಸೋಲ್ ಕೆಲಸ ಮಾಡಿಕೊಂಡಿದ್ದು, ಕಳೆದ ಎಂಟು ವರ್ಷಗಳಿಂದ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿ ಪಾರ್ಕ್ ಬಳಿ ಉಪ್ಪಿನಂಗಡಿಯ ಮಹಮ್ಮದ್ ಅಶ್ರಫ್ ಎಂಬವರ ಕಟ್ಟಡದಲ್ಲಿರುವ ಇಂಡಿಯನ್ ಟಯರ್ಸ್ ಎಂಬ ಟಯರ್ ರಿಸೋಲಿಂಗ್ ಘಟಕವನ್ನು ಅವರಿಬ್ಬರು ತಮ್ಮ ಪಾಲುದಾರಿಕೆಯ ಮಾಲಕತ್ವದಲ್ಲಿ  ನಡೆಸಿಕೊಂಡು ಬಂದು ಅಂಗಡಿಯಲ್ಲಿ ಅವರಿಬ್ಬರು ಕೆಲಸ ಮಾಡಿಕೊಂಡಿದ್ದರು. 


ಬುಧವಾರ (ಜ 18) ರಾಜೇಶ್ ರವರು ಹುಸೇನ್ ರವರ ಜೊತೆ ಎಂದಿನಂತೆ ಟಯರ್ ರಿಸೋಲಿಂಗ್ ಕೆಲಸ ಮಾಡುತ್ತಾ ಹುಸೇನ್ ಅವರು ಒಳ ಕೋಣೆಯಲ್ಲಿ ಟಯರ್ ಬಫಿಂಗ್ ಕೆಲಸ ಮಾಡುತ್ತಿದ್ದು, ರಾಜೇಶ್ ಹೊರಗಡೆ ಇರುವ ಟಯರ್ ಮೌಲ್ಡ್ ಡಿಸ್ಕ್ ಬಳಿ ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ 1 ಗಂಟೆ ವೇಳೆಗೆ ಸದ್ರಿ ಟಯರ್ ಮೌಲ್ಡ್ ಡಿಸ್ಕ್ ಆಕಸ್ಮಿಕವಾಗಿ ಸಿಡಿದು ಪಕ್ಕದಲ್ಲೇ ಇದ್ದ ರಾಜೇಶ್ ಅವರ ಮೈಮೇಲೆ ಬಿದ್ದು, ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ವೈದ್ಯರು ದೃಢಪಡಿಸಿದ್ದಾರೆ. 

ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 06/2023 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಟಯರ್ ಮೌಲ್ಡ್ ಡಿಸ್ಕ್ ಸಿಡಿದು ವ್ಯಕ್ತಿ ದಾರುಣ ಸಾವು Rating: 5 Reviewed By: karavali Times
Scroll to Top