ಬಂಟ್ವಾಳ, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ, ಬಿ ಮೂಡ ಗ್ರಾಮದ ತಾಳಿಪಡ್ಪು ನಿವಾಸಿ ಟಿ ಯೂಸುಫ್ ಅವರ ಪುತ್ರ ಆಸಿಫ್ ಯಾನೆ ಇಬ್ರಾಹಿಂ ಆಸಿಫ್ (30) ಎಂಬಾತ ಬುಧವಾರ ವಿದೇಶದಿಂದ ಬರುವಾಗ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮ್ಮಿಗ್ರೇಶನ್ ಅಧಿಕಾರಿಗಳು ವಾರೆಂಟ್ ಅರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಮಾನ ನಿಲ್ದಾಣ ಅಧಿಕಾರಿಗಳು ಆರೋಪಿಯನ್ನ ವಶಪಡಿಸಿಕೊಂಡ ಮಾಹಿತಿ ಪಡೆದ ಬಂಟ್ವಾಳ ಸಂಚಾರ ಪೊಲೀಸ್ ಸಿಬ್ಬಂದಿಗಳಾದ ದೇವದಾಸ್ ಹಾಗೂ ಸಂದೀಪ್ ಪಿ ಅವರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment