ರಾಜ್ಯ ಸರಕಾರ ಸವಲತ್ತು ನೀಡುವಾಗ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಲಿ - Karavali Times ರಾಜ್ಯ ಸರಕಾರ ಸವಲತ್ತು ನೀಡುವಾಗ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಲಿ - Karavali Times

728x90

21 February 2023

ರಾಜ್ಯ ಸರಕಾರ ಸವಲತ್ತು ನೀಡುವಾಗ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಲಿ

ರಾಕೇಶ್ ಕುಮಾರ್ ರೈ, ಬಿ.ಎ. ವಿದ್ಯಾರ್ಥಿ, ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು


ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಕೊಡುವುದು ಎಂದು 2023ರ ಬಜೆಟ್‍ನಲ್ಲಿ ಮಂಡಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಯಾಕೆ ಈ ಉಚಿತ ಬಸ್ ಪಾಸ್ ಕೊಡಬಾರದು? ಅವರು ಕೂಡ ಈ ದೇಶದ ಪ್ರಜೆಗಳಲ್ಲವೇ? ಅವರಿಗೆ ಕೂಡ ಈ ದೇಶದ ಹಕ್ಕು ಇದೆ ಅಲ್ವಾ? ಮತ್ತೆ ಯಾಕೆ ರಾಜ್ಯ ಸರಕಾರ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಿದೆ.....!!!! ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಕಲರ್ ಡ್ರೆಸ್ ಹಾಕುತ್ತಿದ್ದರು. ಬಡವರು ಮತ್ತು ಶ್ರೀಮಂತರಲ್ಲಿ ತಾರತಮ್ಯ ಆಗಬಾರದು ಎಂಬ ದೃಷ್ಟಿಕೋನದಿಂದ ಸಮವಸ್ತ್ರವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿನಿಗಳಲ್ಲಿ ಮಾತ್ರ ಬಡವರು ಇರುವುದಲ್ಲ ವಿದ್ಯಾರ್ಥಿಗಳಲ್ಲಿ (ಬಾಲಕರು) ಕೂಡ ಬಡವರು ಇದ್ದಾರೆ. ಅವರಿಗೆ ಉಚಿತ ಬಸ್ ಪಾಸ್ ಯಾಕೆ ಕೊಡಬಾರದು? ಸಂವಿಧಾನ ಹೇಳುತ್ತೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು.... ಆದರೆ ಸರಕಾರವೇ ಈ ರೀತಿ ತಾರತಮ್ಯವನ್ನು ಮಾಡಿದರೆ  ಪ್ರಜೆಗಳು ಕೂಡ ಹೀಗೆ ಮಾಡುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆ ಸಮಾಜದ ಜನತೆಗೆ ಕಾಡುವುದು ಸಹಜ. ಸರಕಾರ ಹೆಣ್ಣು ಮಕ್ಕಳಿಗೆ ಸವಲತ್ತು ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೂ ಅದರಲ್ಲಿ ಸಮಾನತೆ ಕಾಪಾಡುವುದು ಸರಕಾರದ ಜವಾಬ್ದಾರಿಯಲ್ಲವೇ? ಸರಕಾರ  ಇನ್ನಾದರೂ ಎಚ್ಚೆತ್ತುಕೊಂಡು ಬಜೆಟ್ ಮಂಡನೆ ಮಾಡುವಾಗ ದೇಶದ ಎಲ್ಲ ಪ್ರಜೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್  ಮಂಡನೆ ಮಾಡಬೇಕಾಗಿ ವಿನಂತಿ. ಉಚಿತ ಬಸ್ ಪಾಸ್ ಕೊಡುವುದಾದರೆ ಎಲ್ಲರಿಗೂ ಕೊಡಬೇಕು. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ಸರಕಾರ ಸವಲತ್ತು ನೀಡುವಾಗ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಲಿ Rating: 5 Reviewed By: karavali Times
Scroll to Top