ಕಡಬ, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ಕಡಬ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 04/2006 ಕಲಂ 279, 337, 338, 304(ಎ) ಐಪಿಸಿ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಕನ್ವಿಕ್ಷನ್ ವಾರೆಂಟ್ ಆರೋಪಿ, ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ನಿವಾಸಿ ಸಯ್ಯದ್ ಕಲೀಂ ಪಾಷ (49) ಬಿನ್ ಸಯ್ಯದ್ ಅಬ್ದುಲ್ ರಶೀದ್ ಎಂಬಾತನನ್ನು ಕಡಬ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಾಜು ನಾಯ್ಕ ಹಾಗೂ ಸಿರಾಜುದ್ದಿನ್ ಅವರು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ತುಲಹಳ್ಳಿ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಫಲರಾಗಿದ್ದಾರೆ.
ಆರೋಪಿಗೆ ನ್ಯಾಯಲಯ 6 ತಿಂಗಳ ಸಜೆ ಮತ್ತು 2,500/- ರೂಪಾಯಿ ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಸಜೆ ವಿಧಿಸಿ ನ್ಯಾಯಲಯ ಆದೇಶಿಸಿದೆ.
0 comments:
Post a Comment