ಬಂಟ್ವಾಳ, ಫೆಬ್ರವರಿ 20, 2023 (ಕರಾವಳಿ ಟೈಮ್ಸ್) : ಉದ್ಯೋಗಕ್ಕಾಗಿ ಫೇಸ್ ಬುಕ್ ಮೂಲಕ ಬಂದ ಜಾಹೀರಾತು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಬಂಟ್ವಾಳ ತಾಲೂಕು, ವೀಕರಂಭ ಗ್ರಾಮದ ವೀರಂಭ-ನಡ್ಚಾಲು ನಿವಾಸಿ ವೆಂಕಪ್ಪ ಆಳ್ವ ಅವರ ಪುತ್ರ ರಾಜೇಶ್ ಆಳ್ವ ಎನ್ (42) ಅವರು ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ದ ದೂರು ದಾಖಲಿಸಿದ್ದಾರೆ.
ರಾಜೇಶ್ ಆಳ್ವ ಅವರು ಬೆಂಗಳೂರಿನ ಹೈಟೆಕ್ ಪ್ರೊಪರ್ ಸೊಲ್ಯುಷನ್ ಎಂಬ ಕಂಪೆನಿಯಲ್ಲಿ ವರ್ಕ್ ಫ್ರಂ ಹೋಂ ಆಗಿ ಕೆಲಸ ಮಾಡುತ್ತಿದ್ದು, ಸದ್ರಿ ಕಂಪೆನಿಯಲ್ಲಿ ಕಡಿಮೆ ವೇತನ ಇರುವುದರಿಂದ ಫೇಸ್ ಬುಕ್ ಮೂಲಕ ಬಂದಿರುವ ಜಾಹೀರಾತಿನಲ್ಲಿದ್ದ ವಾಟ್ಸಾಫ್ ಸಂಖ್ಯೆಗೆ ಕಳೆದ ಡಿ 18 ರಂದು ಸಂಪರ್ಕಿಸಿ ಜಾಬ್ ಬಗ್ಗೆ ವಿಚಾರಿಸಿದಾಗ ಜಾಬ್ ಆಪ್ಲೀಕೇಶನ್ ಫಾರ್ಮ್ ಕಳುಹಿಸಿದ್ದು, ಅದರಲ್ಲಿ ಬಯೋಡೇಟಾ ಹಾಕಿ ಕಳುಹಿಸಿದಾಗ, ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪೆÇ್ರಸೆಸಿಂಗ್ ಚಾರ್ಜಸ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಚಾರ್ಜಸ್ ಗಳಿಗಾಗಿ ಹಣವನ್ನು ಕಳಿಸುವಂತೆ ಕೋರಿದ ಹಿನ್ನಲೆಯಲ್ಲಿ ಹಂತ ಹಂತವಾಗಿ ಎಟಿಎಮ್, ಕ್ಯಾಶ್ ಡೆಪಾಸಿಟ್ ಮೆಶಿನ್ ಮುಖಾಂತರ ಪೆÇೀನ್ ಪೇ ಹಾಗೂ ಪೇಟಿಎಮ್ ಮೂಲಕ ಅಪರಿಚಿತರು ನೀಡಿರುವ ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸಿದ್ದು, ಒಟ್ಟು 9,79,000/- ಹಣವನ್ನು ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಇದೀಗ ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ 66 (ಡಿ) ಐಟಿ ಆಕ್ಟ್ ಹಾಗೂ 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment