ಸೂಫಿ ಸಂತರ ದೈವ ಭಕ್ತಿಯಿಂದಲೇ ಈ ಭೂಮಿಯ ಅಸ್ತಿತ್ವ : ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ - Karavali Times ಸೂಫಿ ಸಂತರ ದೈವ ಭಕ್ತಿಯಿಂದಲೇ ಈ ಭೂಮಿಯ ಅಸ್ತಿತ್ವ : ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ - Karavali Times

728x90

9 February 2023

ಸೂಫಿ ಸಂತರ ದೈವ ಭಕ್ತಿಯಿಂದಲೇ ಈ ಭೂಮಿಯ ಅಸ್ತಿತ್ವ : ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ

ಮೈಸೂರು, ಫೆಬ್ರವರಿ 09, 2023 (ಕರಾವಳಿ ಟೈಮ್ಸ್) : ಹಝ್ರತ್ ಖ್ವಾಜಾ ಗರೀಬ್ ನವಾಝ್ (ರಅ) ಅವರಂತಹ ಮಹಾನುಭಾವರ ಆಧ್ಯಾತ್ಮಿಕ ಶಕ್ತಿಯಿಂದಲೇ ಈ ಭೂಮಿ ನೆಲೆ ನಿಂತಿರುವುದು. ಸೂಫಿ ಸಂತರ ದೈವ ಭಕ್ತಿಯಿಂದಾಗಿ ಅವರು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಮಹಾನುಭಾವರುಗಳನ್ನು ಗೌರವಿಸುವುದರಿಂದಲೇ ನಮ್ಮ ಉನ್ನತಿಯೂ ನಿರ್ಧಾರವಾಗುತ್ತದೆ ಎಂದು ಮೈಸೂರು ಶ್ರೀ ಬಸವಧ್ಯಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಅತಾಯೆ ರಸೂಲ್ ಮೂಮೆಂಟ್ ಮೈಸೂರು ಇದರ ಆಶ್ರಯದಲ್ಲಿ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ಬಸವಧ್ಯಾನ ಮಂದಿರದ ಬಸವಲಿಂಗ ಮೂರ್ತಿ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಅಲಿ ಜನಾಬ್ ಅಝೀಝುಲ್ಲಾ (ಅಜ್ಜು) ಮೈಸೂರು, ಮೈಸೂರು ತಂಝೀಮ್ ಅಹ್ಲೆಸ್ಸುನ್ನತುಲ್ ಜಮಾಅತ್ ಕಾರ್ಯದರ್ಶಿ ಅಲಿ ಜನಾಬ್ ಜಮೀಲ್ ಅಹ್ಮದ್ ಅಶ್ರಫಿ, ಹಝ್ರತ್ ಅಝೀಝುಲ್ಲಾ ಶಾ ಚಿಶ್ತಿ, ಹಝ್ರತ್ ಸಯ್ಯಿದ್ ಬುರ್ಹಾನ್ ಶಾ ಖಾದ್ರಿ, ಹಝ್ರತ್ ಮುಹಮ್ಮದ್ ರೂಹುಲ್ಲಾ ಶಾ ಶಿತಾರ್, ಹಝ್ರತ್ ಸಯ್ಯದ್  ಗೌಸ್ ಪೀರ್ ಶಾ ಖಾದ್ರಿ ಶಿತಾರಿ, ಹಝ್ರತ್ ಐಜಾಝ್ ಮಸ್ತಾನ್ ಶಾ ಹಾಫೀಝ್ ಖಾದ್ರಿ, ಹಝ್ರತ್ ಶೈಖ್ ಝುಬೈರ್ ಷಾ ಚಿಶ್ತಿ ಉಲ್ ಖಾದ್ರಿ, ಹಝ್ರತ್ ಸಯ್ಯದ್ ನವೀಸ್ ಷಾ ಖಾದ್ರಿ, ಹಝ್ರತ್ ನಸ್ರುಲ್ಲಾ ಷಾ ಖಾದ್ರಿ, ಹಝ್ರತ್ ಮಹಬೂಬ್ ಶಾ ಚಿಶ್ತಿ, ಹಝ್ರತ್ ಮುನವ್ವರ್ ವಲಿಯುಲ್ಲಾ ಷಾ ಜುನೈದಿ ಸಹಿತ ಸೂಫಿ ಸಂತರು, ಉಲಮಾಗಳು, ಶರಣ ಸಂತರು, ರಾಜಕೀಯ ನೇತಾರರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೂಫಿ ಸಂತರ ದೈವ ಭಕ್ತಿಯಿಂದಲೇ ಈ ಭೂಮಿಯ ಅಸ್ತಿತ್ವ : ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ Rating: 5 Reviewed By: karavali Times
Scroll to Top