ಅಕ್ರಮ ಮದ್ಯ ದಾಸ್ತಾನು ; ವಿಟ್ಲ ಪೊಲೀಸರ ದಾಳಿ, ಆರೋಪಿ ಅರೆಸ್ಟ್ - Karavali Times ಅಕ್ರಮ ಮದ್ಯ ದಾಸ್ತಾನು ; ವಿಟ್ಲ ಪೊಲೀಸರ ದಾಳಿ, ಆರೋಪಿ ಅರೆಸ್ಟ್ - Karavali Times

728x90

5 February 2023

ಅಕ್ರಮ ಮದ್ಯ ದಾಸ್ತಾನು ; ವಿಟ್ಲ ಪೊಲೀಸರ ದಾಳಿ, ಆರೋಪಿ ಅರೆಸ್ಟ್

ಬಂಟ್ವಾಳ, ಫೆಬ್ರವರಿ 05, 2023 (ಕರಾವಳಿ ಟೈಮ್ಸ್) : ತಾಲೂಕಿನ ಅಳಿಕೆ ಗ್ರಾಮದ ಕುದ್ದುಪದವು ನಿವಾಸಿ ಆನಂದ ಪೂಜಾರಿ ತನ್ನ ಮನೆಯ ಪಕ್ಕದಲ್ಲಿನ ಅಡಿಕೆ ಕೊಠಡಿಯಲ್ಲಿ ಮದ್ಯದ ಬಾಟ್ಲಿಗಳನ್ನು ದಾಸ್ತಾನಿರಿಸಿದ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಯಿಂದ ಸುಮಾರು 7,200/- ರೂಪಾಯಿ ಮೌಲ್ಯದ ಮೈಸೂರು ಲ್ಯಾನ್ಸರ್ ಕಂಪನಿಯ ಮದ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2023 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮದ್ಯ ದಾಸ್ತಾನು ; ವಿಟ್ಲ ಪೊಲೀಸರ ದಾಳಿ, ಆರೋಪಿ ಅರೆಸ್ಟ್ Rating: 5 Reviewed By: karavali Times
Scroll to Top