5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷಾ ಪರಿಷ್ಕøತ ವೇಳಾ ಪಟ್ಟಿ ಪ್ರಕಟ - Karavali Times 5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷಾ ಪರಿಷ್ಕøತ ವೇಳಾ ಪಟ್ಟಿ ಪ್ರಕಟ - Karavali Times

728x90

17 March 2023

5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷಾ ಪರಿಷ್ಕøತ ವೇಳಾ ಪಟ್ಟಿ ಪ್ರಕಟ

ಮಾರ್ಚ್ 27 ರಿಂದ ಎಪ್ರಿಲ್ 1 ರವರೆಗೆ ಪರೀಕ್ಷೆ 


ಬೆಂಗಳೂರು, ಮಾರ್ಚ್ 17, 2023 (ಕರಾವಳಿ ಟೈಮ್ಸ್) : 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು (ಮೌಲ್ಯಾಂಕನ) ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. 

5ನೇ ತರಗತಿಗೆ ಮಾರ್ಚ್ 27 ರಿಂದ 30 ರವರೆಗೆ ನಾಲ್ಕು ದಿನಗಳು, 8ನೇ ತರಗತಿಗೆ ಮಾರ್ಚ್ 27 ರಿಂದ ಎಪ್ರಿಲ್ 1 ರವರೆಗೆ 6 ದಿನಗಳ ಕಾಲ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಲಾಗಿದೆ. 


5ನೇ ತರಗತಿ ಪರಿಷ್ಕøತ ಪರೀಕ್ಷಾ ವೇಳಾಪಟ್ಟಿ


ಮಾರ್ಚ್ 27 ರಂದು ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು.

ಮಾರ್ಚ್ 28 ರಂದು ದ್ವೀಯ ಭಾಷೆ - ಇಂಗ್ಲಿಷ್, ಕನ್ನಡ.

ಮಾರ್ಚ್ 29 ರಂದು ಕೋರ್ ವಿಷಯ - ಪರಿಸರ ಅಧ್ಯಯನ.

ಮಾರ್ಚ್ 30 ರಂದು ಕೋರ್ ವಿಷಯ- ಗಣಿತ.


8ನೇ ತರಗತಿ ಪರಿಷ್ಕøತ ಪರೀಕ್ಷಾ ವೇಳಾಪಟ್ಟಿ


ಮಾರ್ಚ್ 27 ರಂದು ಕನ್ನಡ, ಇಂಗ್ಲಿಷ್, ಇಂಗ್ಲಿಷ್ (ಎನ್.ಸಿ.ಇ.ಆರ್.ಟಿ) ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ತೆಲುಗು, ಸಂಸ್ಕೃತ.

ಮಾರ್ಚ್ 28 ರಂದು ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ.

ಮಾರ್ಚ್ 29 ರಂದು ಹಿಂದಿ, ಹಿಂದಿ (ಎನ್.ಸಿ.ಇ.ಆರ್.ಟಿ), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

ಮಾರ್ಚ್ 30 ರಂದು ಕೋರ್ ವಿಷಯ- ಗಣಿತ.

ಮಾರ್ಚ್ 31 ರಂದು ಕೋರ್ ವಿಷಯ - ವಿಜ್ಞಾನ.

ಎಪ್ರಿಲ್ 1 ರಂದು ಕೋರ್ ವಿಷಯ ಸಮಾಜ ವಿಜ್ಞಾನ.

ಪ್ರತಿ ಪತ್ರಿಕೆಯು ತಲಾ 40 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ಅಂಕದ 20 ಬಹು ಆಯ್ಕೆಯ ಪ್ರಶ್ನೆಗಳು, 20 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಎರಡು ಅಂಕದ ಐದು ಪ್ರಶ್ನೆಗಳು, ಮೂರು ಅಂಕದ ಎರಡು ಪ್ರಶ್ನೆಗಳು, ನಾಲ್ಕು ಅಂಕದ ಒಂದು ಪ್ರಶ್ನೆಯನ್ನು ಪತ್ರಿಕೆಗಳು ಒಳಗೊಂಡಿರುತ್ತವೆ. ಉತ್ತರಿಸಲು ಎರಡು ಗಂಟೆ ಸಮಯ ನಿಗದಿ ಮಾಡಲಾಗಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: 5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷಾ ಪರಿಷ್ಕøತ ವೇಳಾ ಪಟ್ಟಿ ಪ್ರಕಟ Rating: 5 Reviewed By: karavali Times
Scroll to Top