ಬಿ.ಸಿ.ರೋಡು : ರೈತ ಸಂಘದ ಪ್ರತಿಭಟನೆಗೆ ಬಂದವನ ಅಟೋ ರಿಕ್ಷಾ ಕಳವು, ಬಂಟ್ವಾಳ ಪುರಸಭೆಯ ಸೀಸಿ ಕ್ಯಾಮೆರಾದ ಅಸಲಿಯತ್ತು ಬಯಲು - Karavali Times ಬಿ.ಸಿ.ರೋಡು : ರೈತ ಸಂಘದ ಪ್ರತಿಭಟನೆಗೆ ಬಂದವನ ಅಟೋ ರಿಕ್ಷಾ ಕಳವು, ಬಂಟ್ವಾಳ ಪುರಸಭೆಯ ಸೀಸಿ ಕ್ಯಾಮೆರಾದ ಅಸಲಿಯತ್ತು ಬಯಲು - Karavali Times

728x90

8 March 2023

ಬಿ.ಸಿ.ರೋಡು : ರೈತ ಸಂಘದ ಪ್ರತಿಭಟನೆಗೆ ಬಂದವನ ಅಟೋ ರಿಕ್ಷಾ ಕಳವು, ಬಂಟ್ವಾಳ ಪುರಸಭೆಯ ಸೀಸಿ ಕ್ಯಾಮೆರಾದ ಅಸಲಿಯತ್ತು ಬಯಲು

ಬಂಟ್ವಾಳ, ಮಾರ್ಚ್ 08, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಬುಧವಾರ ನಡೆದ ರೈತ ಸಂಘದ ಪ್ರತಿಭಟನೆಗೆ ಭಾಗವಹಿಸಲು ಬಂದಿದ್ದ ವಿಟ್ಲ ಸಮೀಪದ ಮಂಗಿಲಪದವು ನಿವಾಸಿಯ ಅಟೋ ರಿಕ್ಷಾ ಕಳವುಗೈದ ಘಟನೆ ವರದಿಯಾಗಿದೆ. ವೀರಕಂಭ ನಿವಾಸಿ ಯೋಗೀಶ್ ಅವರು ಬುಧವಾರ ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗ ನಡೆದ ರೈತ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದು, ಇವರು ತನ್ನ ಅಟೋ ರಿಕ್ಷಾವನ್ನು ಬಿ ಸಿ ರೋಡು ರೈಲ್ವೇ ನಿಲ್ದಾಣ ಬಳಿಯ ಲಯನ್ಸ್ ಕ್ಲಬ್ ಭವನದ ಮುಂಭಾಗದ ವಿಶಾಲ ಜಾಗದಲ್ಲಿ ನಿಲ್ಲಿಸಿ ಪ್ರತಿಭಟನೆಗೆ ತೆರಳಿದ್ದರು. ಸಂಜೆ ಪ್ರತಿಭಟನೆ ಮುಗಿದ ಬಳಿಕ ಬಂದು ನೋಡಿದಾಗ ಅಟೋ ರಿಕ್ಷಾ ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಲಯನ್ಸ್ ಕ್ಲಬ್ ಭವನದ ಅನತಿ ದೂರದಲ್ಲಿ ಬಂಟ್ವಾಳ ಪುರಸಭೆ ವತಿಯಿಂದ ಸೀಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲರ ಮನದಲ್ಲೂ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದಾಗಿತ್ತು. ಆದರೆ ಇದೀಗ ಅಟೋ ರಿಕ್ಷಾ ಕಳವಾದ ಘಟನೆಗೆ ಸಂಬಂಧಿಸಿದಂತೆ ಸೀಸಿ ಟಿವಿ ಫೂಟೇಜ್ ಪಡೆಯಲು ಮುಂದಾದಾಗ ಇಲ್ಲಿನ ಸೀಸಿ ಕ್ಯಾಮೆರಾದ ನೈಜ ರೂಪ ಬಯಲಾಗಿದೆ. ಈ ಸೀಸಿ ಕ್ಯಾಮೆರಾ ಕೇವಲ ಕಾಗದದ ಹುಲಿಯಂತಾಗಿದ್ದು, ಕಣ್ಣಿಗೆ ಮಣ್ಣೆರಚಲೋ ಎಂಬಂತೆ ಅಳವಡಿಸಲಾಗಿದೆಯೇ ವಿನಃ ಇದು ಕಾರ್ಯನಿರ್ವಹಿಸುತ್ತಿಲ್ಲ. ಇತ್ತೀಚೆಗೆ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಸೀಸಿ ಕ್ಯಾಮೆರಾ ಅವ್ಯವಹಾರದ ಬಗ್ಗೆ ದಿನವಿಡೀ ಚರ್ಚೆ ನಡೆದು ಸಭೆಯ ಕಲಾಪ ಬಲಿಯಾಗಿತ್ತು ಎಂಬುದು ಇಲ್ಲಿ ಗಮನಾರ್ಹ. 

ಇದೀಗ ಅಟೋ ರಿಕ್ಷಾದ ಆದಾಯವನ್ನೇ ನಂಬಿ ಬದುಕುವ ಬಡ ವ್ಯಕ್ತಿ ಯೋಗೀಶ್ ಅವರು ಅಟೋ ರಿಕ್ಷಾ ಕಳವಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಅಟೋ ರಿಕ್ಷಾ ಪತ್ತೆ ಹಚ್ಚಲು ಮನವಿ ಸಲ್ಲಿಸಿದ್ದಾರೆ.  

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ರೈತ ಸಂಘದ ಪ್ರತಿಭಟನೆಗೆ ಬಂದವನ ಅಟೋ ರಿಕ್ಷಾ ಕಳವು, ಬಂಟ್ವಾಳ ಪುರಸಭೆಯ ಸೀಸಿ ಕ್ಯಾಮೆರಾದ ಅಸಲಿಯತ್ತು ಬಯಲು Rating: 5 Reviewed By: karavali Times
Scroll to Top