ಬಂಟ್ವಾಳ, ಮಾರ್ಚ್ 28, 2023 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಪ್ ಬಂಟ್ವಾಳ ವಲಯದ ವತಿಯಿಂದ ರಂಝಾನ್ ಉಪವಾಸ ವೃತದ ಹಿನ್ನಲೆಯಲ್ಲಿ ಉಪವಾಸಿಗ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಉಚಿತ ಇಫ್ತಾರ್ ಟೆಂಟ್ ಕಾರ್ಯಕ್ರಮ ರಂಝಾನ್ ಆರಂಭದಿಂದ ಹಮ್ಮಿಕೊಳ್ಳಲಾಗಿದ್ದು, ಇದು ಪ್ರತಿದಿನವೂ ಮುಂದುವರಿಯುತ್ತಿದೆ. ಹೆದ್ದಾರಿ ಯಾತ್ರಿಕರು ಈ ಇಪ್ತಾರ್ ಟೆಂಟಿನ ಉಪಯೋಗವನ್ನು ಪಡೆಯುತ್ತಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಮುಖಂಡ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ರಂಝಾನ್ ಮೊದಲ ದಿನ ಈ ಇಫ್ತಾರ್ ಟೆಂಟ್ ಕಾರ್ಯಕ್ರಮವನ್ನು ದುವಾ ಮೂಲಕ ಉದ್ಘಾಟಿಸಿದ್ದು, ಬಳಿಕದ ದಿನಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದ್ದು, ರಂಝಾನ್ ಕೊನೆವರೆಗೂ ಇರಲಿದೆ ಎಂದು ತಿಳಿಸಿರುವ ಸಂಸ್ಥೆಯ ಮುಖಂಡರು ಪ್ರತಿದಿನ ಎಸ್ಕೆಎಸ್ಸೆಸ್ಸೆಫ್ ವಿವಿಧ ಶಾಖೆ, ವಲಯಗಳ ವತಿಯಿಂದ ಇದು ನಡೆಯಲಿದೆ ಎಂದಿದ್ದಾರೆ.
ಮಂಗಳವಾರ ವಗ್ಗ ವಲಯದ ವತಿಯಿಂದ ಈ ಫುಡ್ ಕಿಟ್ ಒದಗಿಸಲಾಗಿದ್ದು, ಸ್ವಯಂ ಸೇವಕರಾಗಿ ಸಂಸ್ಥೆಯ ಕಾರ್ಯಕರ್ತರಾದ ಬಶೀರ್ ನಂದಾವರ, ರಶೀದ್ ಅಗ್ರಹಾರ, ಹನೀಫ್ ಉಸ್ತಾದ್, ಮುಹಮ್ಮದ್ ಸಾಗರ್, ಮುಬಾರಕ್ ನೆಹರುನಗರ, ಖಾಲಿದ್ ಕಲ್ಲಗುಡ್ಡೆ, ಅಶ್ರಫ್ ಶಾಂತಿಅಂಗಡಿ, ಹರ್ಶದ್ ಶಾಂತಿಅಂಗಡಿ, ಶಾಹುಲ್ ವಗ್ಗ, ರಿಝ್ವಾನ್ ನಂದಾವರ, ಸಂಶೀರ್ ಶಾಂತಿಅಂಗಡಿ, ಮುಸ್ತಫಾ ಕಟ್ಟದಪಡ್ಪು ಮೊದಲಾದವರು ಸಹಕರಿಸಿದ್ದಾರೆ.
0 comments:
Post a Comment