ಬಂಟ್ವಾಳ, ಮಾರ್ಚ್ 18, 2023 (ಕರಾವಳಿ ಟೈಮ್ಸ್) : ಬಿಜೆಪಿಗರ ಭಾಷಣ ಇನ್ನೂ ಹಿಂದುತ್ವದ ಸುತ್ತ ಸುತ್ತುತ್ತಲೇ ಇದೆ. ಇವರದ್ದು ಸಾಂಸ್ಕೃತಿಕ, ಮತೀಯ ರಾಜಕಾರಣ ಮಾತ್ರವಾಗಿದೆ. ಕಾಂಗ್ರೆಸ್ ಮಾಡಿದ ಅಭಿವೃದ್ದಿಗಳನ್ನು ಮಣ್ಣು ಮುಕ್ಕಿದ್ದೇ ಇವರ ಸಾಧನೆ ಎಂದು ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಹಾಗೂ ಬರಹಗಾರ ಎಂ ಜಿ ಹೆಗ್ಡೆ ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 8ನೇ ದಿನ ಶುಕ್ರವಾರ (ಮಾ 17) ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಗೆ ಸಿದ್ದಾಂತದಲ್ಲೆ ಗೊಂದಲ ಇದೆ. ಬಿಜೆಪಿಯನ್ನು ಪ್ರಶ್ನಿಸಿದವರೆಲ್ಲ ಹಿಂದೂ ವಿರೋಧಿಗಳಾಗುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ ಸಾಧನೆ ಕೊಡುಗೆಗಳನ್ನು ಹಿಂದೂಯೇತರರಿಗೆ ಮಾತ್ರ ಯಾವುದನ್ನಾದರೂ ನೀಡಿದೆಯೇ, ಅಥವಾ ಹಿಂದುಗಳಿಗೆ ಅವು ದೊರೆತಿಲ್ಲವೇ ಎಂದು ಪ್ರಶ್ನಿಸಿದ ಹೆಗ್ಡೆ ಮತಾಂತರ ಕಾಯ್ದೆ, ಅಸ್ಪಶೃತಾ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ಹೀಗಿರುತ್ತಾ ಅದೇಗೆ ಕಾಂಗ್ರೆಸ್ ಈಗೀಗ ಹಿಂದೂ ವಿರೋಧಿ ಆಗಲು ಶುರುವಾಗಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ವಿರುದ್ದ ಮಾತನಾಡುವವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟಿ ಬ್ಯಾಲೆಟ್ ಪೇಪರ್ ರಾಜಕಾರಣ ಮಾಡುವ ಬಿಜೆಪಿಗರು ಜನರಿಗೆ ಕೊಟ್ಟದ್ದು ಜೈಲು ಭಾಗ್ಯ, ಆಸ್ಪತ್ರೆ ಭಾಗ್ಯ ಹಾಗೂ ಸ್ಮಶಾನ ಭಾಗ್ಯ ಮಾತ್ರ. ಆದರೆ ಕಾಂಗ್ರೆಸ್ ಬಡಜನರಿಗೆ ಭಾಗ್ಯಗಳ ಸರಮಾಲೆ ನೀಡಿದ ಸಾಧನೆ ಮಾಡಿದೆ. ಇದಕ್ಕೆ ಇತಿಹಾಸದ ಜೊತೆಗೆ ಜೀವಂತ ಇರುವ ಜನರೂ ಸಾಕ್ಷಿಯಾಗಿದ್ದಾರೆ.
ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ.ಇದನ್ನು ನೆಲೆ ನಿಲ್ಲಿಸಿದ್ದು ಕಾಂಗ್ರೆಸ್. ಮೂವತ್ತು ವರ್ಷ ಸಂಸದರಾಗಿ ಏನೂ ಮಾಡಲಾಗದವರು ಕಾಂಗ್ರೆಸ್ ಎಪ್ಪತ್ತು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ ಎಂದರೆ ಇದು ವ್ಯಂಗ್ಯವಲ್ಲದೇ ಇನ್ನೇನು ಎಂದು ಪ್ರಶ್ನಿಸಿದ ಎಂ ಜಿ ಹೆಗ್ಡೆ ಹಿಂದುತ್ವಕ್ಕೆ ಬೇಸ್ ಇಲ್ಲ. ಕೇವಲ ಚುನಾವಣಾ ಗಿಮಿಕ್ ಮಾತ್ರವಾಗಿ ಹಿಂದುತ್ವ ಬಳಸಲ್ಪಡುತ್ತಿದೆ ಎಂದು ಕಿಡಿ ಕಾರಿದರು.
ಬಿಜೆಪಿಗೆ ಸೇರುವುದನ್ನು ಯಾರೂ ತಡೆಯುವುದಿಲ್ಲ. ಆದರೆ ಬಿಜೆಪಿ ಸೇರಿದರೂ ಅಭಿವೃದ್ದಿ ರಾಜಕಾರಣ ಮಾಡಿ. ಅದು ಬಿಟ್ಟು ಕೋಮುವಾದಕ್ಕೆ ಬಲಿಯಾಗದಿರಿ. ನಿಮ್ಮ ಕುಟುಂಬಕ್ಕೆ ನೀವೆ ಹೊಣೆ ಹೊರತು ಹಿಂದುತ್ವದ ಭಾಷಣ ಮಾಡುವವರಲ್ಲ ಎಂದು ಕಿವಿಮಾತು ಹೇಳಿದರು.
ಎರಡೂ ಕೋಮುವಾದಿ ಶಕ್ತಿಗಳು ಬಡ ಯುವಕರ ಮನಸ್ಸಲ್ಲಿ ಹುಚ್ಚು ಕನಸು ಹುಟ್ಟು ಹಾಕುತ್ತಿದೆ ಎಂದ ಹೆಗ್ಡೆ ನಮ್ಮ ಸಂಸದರ ಎರಡು ಸಾವಿರ ರೂಪಾಯಿಯ ಮರಳು ಇನ್ನೂ ಮನೆ ಬಾಗಿಲಿಗೆ ಬರಲೇ ಇಲ. ಬಿಜೆಪಿಗರ ಹಿಂದುತ್ವ ಒರಿಜಿನಲ್ ಅಲ್ಲ ಬರೀ ಡೋಂಗಿ. ಗುಳಿಗ ದೈವದ ಬಗ್ಗೆ ಗೊತ್ತೆ ಇಲ್ಲದವ ಹಿಂದುತ್ವ ಸರಕಾರದ ಗೃಹ ಮಂತ್ರಿ.. ದ್ವೇಷ, ಅಸೂಯೆ, ನಿಂದನೆ, ಚಾರಿತ್ರ್ಯ ಹನನ ಮಾಡುವುದೇ ಬಿಜೆಪಿಗರ ಕಾಯಕವಾಗಿದ್ದು, ಅದೇಗೆ ಹಿಂದುತ್ವ ಆಗಲು ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ ರೈಗಳ ಐದು ಸಾವಿರ ಕೋಟಿ ರೂಪಾಯಿ ಕಾರ್ಯಕ್ರಮಗಳ ಕೌಂಟರ್ ಆಗಿ ತಮ್ಮದೇನಾದರೂ ಕೋಟಿಯ ಅಭಿವೃದ್ದಿ ಇದ್ರೆ ಅದನ್ನು ಹೇಳಿ ರಾಜಕಾರಣ ಮಾಡಿ ಅದು ಬಿಟ್ಟು ಮತೀಯವಾದದ ರಾಜಕಾರಣಕ್ಕೆ ಇನ್ನು ಉಳಿಗಾಲವಿಲ್ಲ. ಭಾವನಾತ್ಮಕ ಭಾಷಣಗಳಿಂದ ಏನೂ ಆಗುವುದಿಲ್ಲ. ನೀವೆಷ್ಟೇ ಹೀಯಾಳಿಸಿದರೂ ಕಾಂಗ್ರೆಸ್ ಯಾವತ್ತೂ ಮತೀಯ ರಾಜಕಾರಣ ಮಾಡೋದೇ ಇಲ್ಲ. ನಮ್ಮದೇನಿದ್ದರೂ ಬಹುತ್ವದ ರಾಜಕಾರಣ ಮಾತ್ರ. ಅಧಿಕಾರ ಬಂದರೂ ಸರಿ ಹೋದರೂ ಸರಿ ಎಂದವರು ಗುಡುಗಿದರು.
ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುತ್ತೇನೆ : ರೈ
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ನಕಾರಾತ್ಮಕ ಚಿಂತನೆಗಳಿಗೆ ಜನ ಮರುಳಾಗುವುದು ಜಾಸ್ತಿ. ಆದರೆ ಈ ಬಾರಿ ಜನ ಎಲ್ಲ ಅರ್ಥ ಮಾಡಿಕೊಂಡಿದ್ದಾರೆ. ಅಪಪ್ರಚಾರಕ್ಕೆ ಇನ್ನು ಮುಂದೆ ಜನ ಬೆಲೆ ನೀಡಲಾರರು. ಶವ ಸಂಸ್ಕಾರಕ್ಕೆ ಕೊಡುವ ಐದು ಸಾವಿರವನ್ನೂ ಕೊಡಲಾಗದ ದರಿದ್ರ ಸರಕಾರ ರಾಜ್ಯದಲ್ಲಿದೆ. ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನನ್ನ ಕನಸು ನನ್ನ ಸೋಲಿನ ಬಳಿಕ ನೆನೆಗದಿಗೆ ಬಿದ್ದಿದೆ. ಇನ್ನೊಮ್ಮೆ ನನಗೆ ಅವಕಾಶ ನೀಡಿದರೆ ಗೆದ್ದ ತಕ್ಷಣ ಬಂಟ್ವಾಳ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಯುವ ಜೆಡಿಎಸ್ ಮುಖಂಡ ಜಿ ಎ ಅಮಾನುಲ್ಲಾ ಅವರು ಮಾಜಿ ಸಚಿವ ರಮಾನಾಥ ರೈ ಹಾಗೂ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಪಾಣೆಮಂಗಳೂರು ಪೇಟೆಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಗುಡ್ಡೆಅಂಗಡಿಯಲ್ಲಿ ಜೆಸಿಬಿ ಬಳಸಿ ರಮಾನಾಥ ರೈ ಅವರಿಗೆ ಪುಷ್ಪಾರ್ಚನೆ ಮಾಡಿ ಅದ್ದೂರು ಸ್ವಾಗತ ನೀಡಲಾಯಿತು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಶರೀಫ್ ಭೂಯಾ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯರಾದ ಲುಕ್ಮಾನ್ ಬಿ ಸಿ ರೋಡು, ಜನಾರ್ದನ ಚೆಂಡ್ತಿಮಾರ್, ಬಿ ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಮುಹಮ್ಮದ್ ನಂದರಬೆಟ್ಟು, ಹಸೈನಾರ್ ತಾಳಿಪಡ್ಪು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ತಾ ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ತಾ ಪಂ ಮಾಜಿ ಉಪಾಧ್ಯಕ್ಷ ಹಾಜಿ ಉಸ್ಮಾನ್ ಕರೋಪಾಡಿ, ಮಾಜಿ ಸದಸ್ಯ ಸಂಜೀವ ಪೂಜಾರಿ, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಪ್ರಮುಖರಾದ ಶಶಿಧರ್ ಹೆಗ್ಡೆ, ಟಿ ಎಂ ಶಹೀದ್ ಸುಳ್ಯ, ಸುಹೈಲ್ ಕಂದಕ್, ಜಯಶೀಲ ಅಡ್ಯಂತಾಯ, ಪಿ.ಎ. ರಹೀಂ, ಸ್ಟೀವನ್ ಡಿಸೋಜ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ರಾಜೀವ್ ಕಕ್ಕೆಪದವು, ವೆಂಕಪ್ಪ ಪೂಜಾರಿ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ಮಧುಸೂಧನ್ ಭಟ್ ಬೊಂಡಾಲ, ಮುಸ್ತಫಾ ಎಂ ಎಚ್ ಬೋಳಂಗಡಿ, ಶರೀಫ್ ಆಲಾಡಿ, ಪ್ರವೀಣ್ ಆಳ್ವ, ಉಮೇಶ್ ನಾಯಿಲ, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಅಬ್ದುಲ್ ಮಜೀದ್ ಬೋಗೋಡಿ, ನಹೀಂ ಎನ್ ಬಿ, ಹಿಶಾಂ, ಕಬೀರ್ ಬಂಗ್ಲೆಗುಡ್ಡೆ, ಸಜ್ಜಾದ್, ಸಾಬಿತ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment