ಇರ್ವತ್ತೂರು ಪದವು ದಫ್ ಸ್ಪರ್ಧೆ : ಮಣಿಪುರ ಖಲಂದರ್ ಷಾ ತಂಡಕ್ಕೆ ಪ್ರಶಸ್ತಿ
ಬಂಟ್ವಾಳ, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ಇಸ್ಲಾಮಿ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ವಿವಿಧ ಸಂಘ-ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ದಫ್ ಕಲಾಕಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು ಮುಂದೆಯೂ ಸದಾ ನಡೆದು ಬರುವ ಮೂಲಕ ದಫ್ ಕಲೆ ಶಾಶ್ವತವಾಗಿ ಉಳಿಯುವಂತಾಗಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಇರ್ವತ್ತೂರು ಪದವು, ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಇದರ ಆಶ್ರಯದಲ್ಲಿ ಮಸೀದಿ ವಠಾರದ ತಾಜುಲ್ ಉಲಮಾ, ಶಂಸುಲ್ ಉಲಮಾ ವೇದಿಕೆಯಲ್ಲಿ ಮಾರ್ಚ್ 11 ರಂದು ನಡೆದ ದಫ್ ಸ್ಪರ್ಧಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಫ್ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟನೆಗಳು ಸ್ಪರ್ಧಾ ವಿಜೇತರಿಗೆ ನೀಡುವ ಬಹುಮಾನದ ಜೊತೆಗೆ ಇತರ ತಂಡಗಳ ಶ್ರೇಯೋಭಿವೃದ್ದಿ ನಿಟ್ಟಿನಲ್ಲೂ ಮಹತ್ವದ ಕ್ರಮ ಕೈಗೊಂಡು ಎಲ್ಲ ತಂಡಗಳಿಗೆ ಪ್ರೋತ್ಸಾಹದಾಯಕ ನೀತಿ ಅನುಸರಿಸುವಂತೆ ಕರೆ ನೀಡಿದರು.
ಇರ್ವತ್ತೂರು ಪದವು ಮಸೀದಿ ಖತೀಬ್ ಉಮರ್ ಮದನಿ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಎಸ್.ಪಿ. ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯರಾದ ಹಂಝ ಬಸ್ತಿಕೋಡಿ, ಇಬ್ರಾಹಿಂ ಕೈಲಾರ್, ಬುರೂಜ್ ಶಾಲಾ ಸಂಚಾಲಕ ಶೇಖ್ ರಹ್ಮತುಲ್ಲ, ಪ್ರಮುಖರಾದ ರಫೀಕ್ ಮದನಿ, ಸಿದ್ದೀಕ್ ಸಖಾಫಿ, ಹಾಜಿ ಯೂಸುಫ್ ಮೂರ್ಜೆ, ಪಿ ಕೆ ಇದ್ದಿನಬ್ಬ ಇರ್ವತ್ತೂರು ಪದವು, ಅಬ್ದುಲ್ ಲತೀಫ್ ಕಲಾಬಾಗಿಲು, ಅಬೂಬಕ್ಕರ್ ಟಿ.ಎಸ್.ಎನ್, ಸಾಗರ್ ಮುಹಮ್ಮದ್ ಮದ್ದಡ್ಕ, ರಹ್ಮತುಲ್ಲಾ ಸಾಹೇಬ್, ಅಬ್ದುಲ್ ರಝಾಕ್ ಮಾವಿನಕಟ್ಟೆ, ಅಬ್ದುಲ್ ರಶೀದ್ ನೇರಳಕಟ್ಟೆ, ಅಬ್ದುಲ್ ನಝೀರ್ ಸಾಹೇಬ್, ಮೂಸಾ ನೈನಾಡ್, ಪಿ ಎಚ್ ಇಸ್ಮಾಯಿಲ್ ಝಕೀರ್, ಮೊಯಿದಿನ್ ಕಟ್ಟದಪಡ್ಪು, ಮುಹಮ್ಮದ್ ರಫೀಕ್ ವಾಮದಪದವು, ಮುಹಮ್ಮದ್ ಝಾಹಿದ್, ಮುಹಮ್ಮದ್ ಶರೀಫ್, ಶಹೀದ್ ಯೂಸುಫ್, ಮುಹಮ್ಮದ್ ವಸೀಂ, ಅಬ್ದುಲ್ ಖಾದರ್ ಮಾವಿನಕಟ್ಟೆ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಳೆದ 35 ವರ್ಷಗಳಿಂದ ದಫ್ ಕಲಾ ಸೇವೆಯಲ್ಲಿ ನಿರತರಾಗಿರುವ ಅಬ್ದುಲ್ಲಾ ಉಸ್ತಾದ್ ಅವರನ್ನು ಮಸೀದಿ ಹಾಗೂ ಯಂಗ್ ಮೆನ್ಸ್ ವತಿಯಿಂದ ಹಾಗೂ ಮಸೀದಿ ಅಧ್ಯಕ್ಷ ಎಸ್.ಪಿ. ಮುಹಮ್ಮದ್ ರಫೀಕ್ ಅವರನ್ನು ಬಿಜೆಎಂ ಗಲ್ಫ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಮಣಿಪುರ ಖಲಂದರ್ ಷಾ ತಂಡಕ್ಕೆ ಪ್ರಶಸ್ತಿ
12 ತಂಡಗಳು ಭಾಗವಹಿಸಿದ್ದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿ-ಮಣಿಪುರದ ಖಲಂದರ್ ಷಾ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಮಜೂರು-ಕಾಪುವಿನ ಸಿರಾಜುಲ್ ಹುದಾ ದಫ್ ತಂಡ ದ್ವಿತೀಯ, ಬಿ.ಸಿ.ರೋಡು-ಕೈಕಂಬದ ರಿಫಾಯಿಯ ದಫ್ ತಂಡ ತೃತೀಯ ಹಾಗೂ ಕೃಷ್ಣಾಪುರದ ಲಜ್‍ನತುಲ್ ಅನ್ಸಾರಿಯ ದಫ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ತೀರ್ಪುಗಾರರಾಗಿ ಆರ್ ಕೆ ರಫೀಕ್ ಮದನಿ ಅಮ್ಮೆಂಬಳ, ಫಾರೂಕ್ ಮಂಜನಾಡಿ ಹಾಗೂ ಮುಹಮ್ಮದ್ ಸರ್ವಾನ್ ಕಾರ್ಯನಿರ್ವಹಿಸಿದರು. ಅಝರ್ ಪಂಜೋಡಿ ಸ್ವಾಗತಿಸಿ, ಮುನೀರ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ಸ್ವಲಾತ್ ವಾರ್ಷಿಕ ಹಾಗೂ ಬುರ್‍ದಾ ಮಜ್ಲಿಸ್
ಮಾರ್ಚ್ 12 ರಂದು 17ನೇ ಸ್ವಲಾತ್ ವಾರ್ಷಿಕ, ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ಬಾಅಲವಿ ತಂಙಳ್ ನೇತೃತ್ವ ವಹಿಸಿದ್ದರು. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಉದ್ಘಾಟಿಸಿದರು. ಬಳಿಕ ಸುರೂರೆ ಮದೀನಾ ಫರಂಗಿಪೇಟೆ ಬುರ್‍ದಾ ತಂಡದಿಂದ ಬುರ್‍ದಾ ಮಜ್ಲಿಸ್ ಆಲಾಪನೆ ನಡೆಯಿತು.
0 comments:
Post a Comment