ಕೂಡಿಬೈಲು : ಮೂಡೂರು-ಪಡೂರು “ಬಂಟ್ವಾಳ ಕಂಬಳ” ಕೂಟದ ಫಲಿತಾಂಶ - Karavali Times ಕೂಡಿಬೈಲು : ಮೂಡೂರು-ಪಡೂರು “ಬಂಟ್ವಾಳ ಕಂಬಳ” ಕೂಟದ ಫಲಿತಾಂಶ - Karavali Times

728x90

6 March 2023

ಕೂಡಿಬೈಲು : ಮೂಡೂರು-ಪಡೂರು “ಬಂಟ್ವಾಳ ಕಂಬಳ” ಕೂಟದ ಫಲಿತಾಂಶ

ಬಂಟ್ವಾಳ, ಮಾರ್ಚ್ 05, 2023 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾರ್ಚ್ 4 ಹಾಗೂ 5 ರಂದು ಅದ್ದೂರಿಯಾಗಿ ನಡೆದ ಮೂಡೂರು-ಪಡೂರು ಜೋಡುಕರೆ “ಬಂಟ್ವಾಳ ಕಂಬಳ” ಕೂಟದ ಫಲಿತಾಂಶ ಈ ರೀತಿಯಾಗಿದೆ : 

ಕಂಬಳ ಕೂಟದಲ್ಲಿ 4 ಜೊತೆ ಕನೆಹಲಗೆ, 7 ಜೊತೆ ಅಡ್ಡ ಹಲಗೆ, 21 ಜೊತೆ ಹಗ್ಗ ಹಿರಿಯ, 27 ಜೊತೆ ನೇಗಿಲು ಹಿರಿಯ, 25 ಜೊತೆ ಹಗ್ಗ ಕಿರಿಯ, 105 ಜೊತೆ ನೇಗಿಲು ಕಿರಿಯ ಸಹಿತ ಒಟ್ಟು 189 ಜೊತೆ ಕೋಣಗಳು ಭಾಗವಹಿಸಿವೆ. 

ಕನೆಹಲಗೆ (ನೀರು ನೋಡಿ ಬಹುಮಾನ)

ಪ್ರಥಮ : ಬೇಲಾಡಿ ಬಾವ ಅಶೋಕ್ ಶೆಟ್ಟಿ (ಹಲಗೆ ಮುಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ)

ದ್ವಿತೀಯ : ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ (ಹಲಗೆ ಮುಟ್ಟಿದವರು : ಬೈಂದೂರು ಮಹೇಶ್ ಪೂಜಾರಿ) 

ಅಡ್ಡ ಹಲಗೆ 

ಪ್ರಥಮ : ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ (ಹಲಗೆ ಮುಟ್ಟಿದವರು : ಸಾವ್ಯ ಗಂಗಯ್ಯ ಪೂಜಾರಿ)

ದ್ವಿತೀಯ : ಮಾನೆಲ್ ಪುರಲ್ದಪ್ಪೆ ಮಣ್ಣ್ ದ ಜೋಕುಲ್ ಜವನೆರ್ (ಹಲಗೆ ಮುಟ್ಟಿದವರು : ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) 

ಹಗ್ಗ ಹಿರಿಯ

ಪ್ರಥಮ : ನಂದಳಿಕೆ ಶ್ರೀಕಾಂತ್ ಭಟ್ “ಬಿ” (ಓಡಿಸಿದವರು : ಬಂಬ್ರಾಣ ಬೈಲು ವಂದಿತ್ ಶೆಟ್ಟಿ)

ದ್ವಿತೀಯ : ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಬಿ” (ಓಡಿಸಿದವರು : ಬಜಗೋಳಿ  ಜೋಗಿಬೆಟ್ಟು ನಿಶಾಂತ್ ಶೆಟ್ಟಿ)

ಹಗ್ಗ ಕಿರಿಯ

ಪ್ರಥಮ : ಕಾವಲು ಕಟ್ಟೆ ಕರಂಬಾರು ಬೆಟ್ಟು ಹರೀಶ್ ದಾಸ್ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ) 

ದ್ವಿತೀಯ : ಮಾಣಿ ಸಾಗು ಮನೆ ಸಂಜೀವ ಶೆಟ್ಟಿ (ಓಡಿಸಿದವರು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)

ನೇಗಿಲು ಹಿರಿಯ 

ಪ್ರಥಮ : ಬೋಳದಗುತ್ತು ಸತೀಶ್ ಶೆಟ್ಟಿ “ಬಿ” (ಓಡಿಸಿದವರು : ಕೊಳಕೆ ಇರ್ವತ್ತೂರು ಆನಂದ್)

ದ್ವಿತೀಯ :  ನಾವೂರು ನೆಕ್ಕಿಲಾರು ಲಿಂಗಪ್ಪ ಪೂಜಾರಿ “ಎ” (ಓಡಿಸಿದವರು : ಬೈಂದೂರು ವಿವೇಕ್ ಪೂಜಾರಿ)

ನೇಗಿಲು ಕಿರಿಯ 

ಪ್ರಥಮ : ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ ಕೋಟ್ಯಾನ್ (ಓಡಿಸಿದವರು : ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)

ದ್ವಿತೀಯ : ಮಾಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್ “ಎ” (ಓಡಿಸಿದವರು : ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ)

ವಿಜೇತರಿಗೆ ಮಾಜಿ ಸಚಿವ, ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಸಮಿ ಪದಾಧಿಕಾರಿಗಳಾದ ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆ ಮಾಯಿಲಪ್ಪ ಸಾಲ್ಯಾನ್, ಎಡ್ತೂರು ರಾಜೀವ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಲೋಲಾಕ್ಷ ಶೆಟ್ಟಿ, ಹಸೈನಾರ್ ಶಾಂತಿಅಂಗಡಿ, ಜನಾರ್ದನ ಚೆಂಡ್ತಿಮಾರ್, ಬಿ ವಾಸು ಪೂಜಾರಿ, ಸದಾಶಿವ ಬಂಗೇರ, ಬಿ ಉಮೇಶ್ ಕುಲಾಲ್, ಲವೀನಾ ವಿಲ್ಮಾ ಮೊರಾಸ್,  ಚಿತ್ತರಂಜನ್ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಅವಿಲ್ ಮೆನೇಜಸ್, ಫಿಲಿಪ್ ಫ್ರಾಂಕ್, ಅರ್ಶದ್ ಸರವು, ದೇವಿಪ್ರಸಾದ್ ಪೂಂಜಾ, ಸ್ಟೀವನ್ ಡಿಸೋಜ, ಪರಮೇಶ್ವರ, ಪ್ರಶಾಂತ್ ಕುಲಾಲ್, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಸಂಪತ್ ಕುಮಾರ್ ಶೆಟ್ಟಿ, ಮಧುಸೂಧನ್ ಶೆಣೈ, ಮೆಲ್ವಿನ್ ಡಯಾಸ್, ಜಗದೀಶ್ ಕೊಯಿಲ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಆಲ್ಬರ್ಟ್ ಮೆನೆಜಸ್, ತಿಲಕ್ ಮಂಚಿ, ರಂಜಿತ್ ಪೂಜಾರಿ ಬಿ ಸಿ ರೋಡು, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ರಮೇಶ್ ಪಣೋಲಿಬೈಲು, ರಾಜೀವ ಕಕ್ಕೆಪದವು ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕೂಡಿಬೈಲು : ಮೂಡೂರು-ಪಡೂರು “ಬಂಟ್ವಾಳ ಕಂಬಳ” ಕೂಟದ ಫಲಿತಾಂಶ Rating: 5 Reviewed By: karavali Times
Scroll to Top