ದಕ್ಷಿಣ ಕನ್ನಡ ಪೊಲೀಸ್ ಕಾರ್ಯಾಚರಣೆ : ವಿವಿಧ ಠಾಣೆಗಳಲ್ಲಿ ಅಬಕಾರಿ ಹಾಗೂ ಮಟ್ಕಾ ಪ್ರಕರಣ ದಾಖಲು - Karavali Times ದಕ್ಷಿಣ ಕನ್ನಡ ಪೊಲೀಸ್ ಕಾರ್ಯಾಚರಣೆ : ವಿವಿಧ ಠಾಣೆಗಳಲ್ಲಿ ಅಬಕಾರಿ ಹಾಗೂ ಮಟ್ಕಾ ಪ್ರಕರಣ ದಾಖಲು - Karavali Times

728x90

14 March 2023

ದಕ್ಷಿಣ ಕನ್ನಡ ಪೊಲೀಸ್ ಕಾರ್ಯಾಚರಣೆ : ವಿವಿಧ ಠಾಣೆಗಳಲ್ಲಿ ಅಬಕಾರಿ ಹಾಗೂ ಮಟ್ಕಾ ಪ್ರಕರಣ ದಾಖಲು

ಮಂಗಳೂರು, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2 ಅಬಕಾರಿ ಕಾಯ್ದೆ ಪ್ರಕರಣ ಹಾಗೂ ಒಂದು ಮಟ್ಕಾ ಪ್ರಕರಣ ದಾಖಲಾಗಿದೆ. 

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 4.5 ಲೀಟರ್ ಅಕ್ರಮ ಮಧ್ಯ ಹಾಗೂ 500 ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಆರೋಪಿ, ಪುತ್ತೂರು-ಒಳಮೊಗ್ರು ನಿವಾಸಿ ಯಜ್ಞತ ರೈ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ. 

ವಿಟ್ಲ ಪೊಲೀಸ್ ಠಾಣೆಯಲ್ಲಿ ಒಟ್ಟು 8.640 ಲೀಟರ್ ಅಕ್ರಮ ಮಧ್ಯ, ಸಾಗಾಟಕ್ಕೆ ಬಳಸಿದ ಒಂದು ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ, ವಿಟ್ಲ ಸಮೀಪದ ಮಾಣಿಲ ಗ್ರಾಮದ ನಿವಾಸಿ ಶ್ರೀಧರ್ ಎ ಹಾಗೂ ನರಸಪ್ಪ ಎಂಬವರ ಮೇಲೆ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಾದ ಮಹಮ್ಮದ್ ಇಲಿಯಾಸ್ ಹಾಗೂ ಸುಕುಮಾರ್

ಎಂಬವರ ಮೇಲೆ ಮಟ್ಕಾ ಪ್ರಕರಣ ದಾಖಲಾಗಿದ್ದು, 14,390 ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಪೊಲೀಸ್ ಕಾರ್ಯಾಚರಣೆ : ವಿವಿಧ ಠಾಣೆಗಳಲ್ಲಿ ಅಬಕಾರಿ ಹಾಗೂ ಮಟ್ಕಾ ಪ್ರಕರಣ ದಾಖಲು Rating: 5 Reviewed By: karavali Times
Scroll to Top