ಕೂಡಿಬೈಲು : ಕೂಡಿಬಾಳುವ ನಿಟ್ಟಿನಲ್ಲಿ ಕಂಬಳ ಮುಂದುವರಿಕೆ : ಮಾಜಿ ಸಚಿವ ರೈ - Karavali Times ಕೂಡಿಬೈಲು : ಕೂಡಿಬಾಳುವ ನಿಟ್ಟಿನಲ್ಲಿ ಕಂಬಳ ಮುಂದುವರಿಕೆ : ಮಾಜಿ ಸಚಿವ ರೈ - Karavali Times

728x90

3 March 2023

ಕೂಡಿಬೈಲು : ಕೂಡಿಬಾಳುವ ನಿಟ್ಟಿನಲ್ಲಿ ಕಂಬಳ ಮುಂದುವರಿಕೆ : ಮಾಜಿ ಸಚಿವ ರೈ

 

ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ಸಂಭ್ರಮದ ಚಾಲನೆ


ಬಂಟ್ವಾಳ, ಮಾರ್ಚ್ 04, 2023 (ಕರಾವಳಿ ಟೈಮ್ಸ್) : ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಕೂಡಿ ಬಾಳುವ ಮಹತ್ತರ ಉದ್ದೇಶ ಇಟ್ಟುಕೊಂಡು ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಮತ್ತೆ ಮುಂದುವರಿಸಲಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು. 

ರಮಾನಾಥ ರೈ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯ ಕಂಬಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 12ನೇ ವರ್ಷದ ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ಶನಿವಾರ (ಮಾ 4)  (ನಾಳೆ) ಸಂಭ್ರಮದ ಚಾಲನೆ ನೀಡಿ ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮಗುರು ವಂದನೀಯ ಫೆಡ್ರಿಕ್ , ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ ಜಿನರಾಜ ಅರಿಗ, ಮಂಗಳೂರು ಶಾಸಕ ಜೆ ಆರ್ ಲೋಬೋ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರುಗಳಾದ ಲೋಲಾಕ್ಷ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜನಾರ್ದನ ಚೆಂಡ್ತಿಮಾರ್, ರಚನಾ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಲಿಯೋ ಫೆರ್ನಾಂಡಿಸ್ ಸರಪಾಡಿ, ನಾವೂರು ಗ್ರಾ ಪಂ ಅಧ್ಯಕ್ಷ ಬಿ ಉಮೇಶ್ ಕುಲಾಲ್, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಜಿ ಪಂ ಮಾಜಿ ಸದಸ್ಯರಾದ ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ತಾ ಪಂ ಮಾಜಿ ಸದಸ್ಯೆ ಫ್ಲೋಸಿ ಡಿಸೋಜ, ಬುಡಾ ಮಾಜಿ ಅಧ್ಯಕ್ಷಸ ದಾಶಿವ ಬಂಗೇರ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಇಂಟಕ್ ಜಿಲ್ಲಾಧ್ಯಕ್ಷ  ಚಿತ್ತರಂಜನ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ,  ಪ್ರಮುಖರಾದ ಅವಿಲ್ ಮೆನೇಜಸ್, ಫಿಲಿಪ್ ಫ್ರಾಂಕ್, ಎಡ್ತೂರು ರಾಜೀವ್ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಸ್ಟೀವನ್ ಡಿಸೋಜ, ಪರಮೇಶ್ವರ, ಅಬ್ದುಲ್ ಕರೀಂ ಬೊಳ್ಳಾಯಿ, ಮಲ್ಲಿಕಾ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಮಹಾಬಲ ಆಳ್ವ, ಮೆಲ್ವಿನ್ ಡಯಾಸ್, ಜಗದೀಶ್ ಕೊಯಿಲ, ನಾರಾಯಣ ನಾಯ್ಕ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ತಿಲಕ್ ಮಂಚಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ರಮೇಶ್ ಪಣೋಲಿಬೈಲು, ಮೊದಲಾದವರು ಭಾಹವಹಿಸಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕೂಡಿಬೈಲು : ಕೂಡಿಬಾಳುವ ನಿಟ್ಟಿನಲ್ಲಿ ಕಂಬಳ ಮುಂದುವರಿಕೆ : ಮಾಜಿ ಸಚಿವ ರೈ Rating: 5 Reviewed By: karavali Times
Scroll to Top