ಮೆಟ್ಟಿಲು ಏರುವ ಸ್ಥಿತಿಯಲ್ಲಿದ್ದ ಪಾಣೆಮಂಗಳೂರು ಅಂಚೆ ಕಚೇರಿಗೆ ಕೊನೆಗೂ ಮುಕ್ತಿ : ನೂತನ ಕಟ್ಟಡಕ್ಕೆ ಸ್ಥಳಾಂತರ - Karavali Times ಮೆಟ್ಟಿಲು ಏರುವ ಸ್ಥಿತಿಯಲ್ಲಿದ್ದ ಪಾಣೆಮಂಗಳೂರು ಅಂಚೆ ಕಚೇರಿಗೆ ಕೊನೆಗೂ ಮುಕ್ತಿ : ನೂತನ ಕಟ್ಟಡಕ್ಕೆ ಸ್ಥಳಾಂತರ - Karavali Times

728x90

31 March 2023

ಮೆಟ್ಟಿಲು ಏರುವ ಸ್ಥಿತಿಯಲ್ಲಿದ್ದ ಪಾಣೆಮಂಗಳೂರು ಅಂಚೆ ಕಚೇರಿಗೆ ಕೊನೆಗೂ ಮುಕ್ತಿ : ನೂತನ ಕಟ್ಟಡಕ್ಕೆ ಸ್ಥಳಾಂತರ

ಸ್ಥಳಾಂತರಗೊಂಡ ಪಾಣೆಮಂಗಳೂರು ಅಂಚೆ ಕಚೇರಿ ನೂತನ ಕಟ್ಟಡದಲ್ಲಿ ಉದ್ಘಾಟನೆಗೊಂಡ ದೃಶ್ಯ
ಹಳೆ ಅಂಚೆ ಕಚೇರಿಯು ಮೆಟ್ಟಿಲುಗಳಿಂದ ಕೂಡಿದ ದೃಶ್ಯ

ಬಂಟ್ವಾಳ, ಎಪ್ರಿಲ್ 01, 2023, 2023 (ಕರಾವಳಿ ಟೈಮ್ಸ್) : ಹಲವು ಮೆಟ್ಟಿಲುಗಳನ್ನು ಏರಿ ಇಳಿಯುವ ಸ್ಥಿತಿಯಲ್ಲಿದ್ದ ತಾಲೂಕಿನ ಪಾಣೆಮಂಗಳೂರು ಅಂಚೆ ಕಚೇರಿಯು ಸಾರ್ವಜನಿಕರ ಬೇಡಿಕೆ ಹಿನ್ನಲೆಯಲ್ಲಿ ಕೊನೆಗೂ ಕಳೆದ ಗುರುವಾರ (ಮಾ 23) ಸ್ಥಳಾಂತರಗೊಂಡಿದೆ. 

ಪಾಣೆಮಂಗಳೂರು-ಆಲಡ್ಕ ಅಲ್-ಶಿಫಾ ನರ್ಸಿಂಗ್ ಹೋಂ ಎದುರುಗಡೆಯ ಖಾಸಗಿ ಕಟ್ಟಡದ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಣೆಮಂಗಳೂರು ಅಂಚೆ ಕಚೇರಿ ಹಲವಾರು ಮೆಟ್ಟಿಲು ಹತ್ತಿ ಏರುವ ಸ್ಥಿತಿಯಲ್ಲಿದ್ದು, ಇಲ್ಲಿಗೆ ಸೇವೆ ಪಡೆಯಲು ಬರುವ ಗ್ರಾಹಕರು ಅದರಲ್ಲೂ ಪ್ರಾಯಸ್ಥರು, ಅಶಕ್ತರು, ಅನಾರೋಗ್ಯ ಪೀಡಿತರು ಹಾಗೂ ಭಿನ್ನಚೇತನರು ಬಹಳಷ್ಟು ಕಷ್ಟಪಡುತ್ತಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿನ ಅಂಚೆ ಕಚೇರಿಯನ್ನು ಸೂಕ್ತ ಹಾಗೂ ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕಳೆದ ಆಗಸ್ಟ್ ತಿಂಗಳಲ್ಲಿ ಕರಾವಳಿ ಟೈಮ್ಸ್ ಸಚಿತ್ರ ವರದಿಯನ್ನು ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. 

ಇದೀಗ ಇಲ್ಲಿನ ಅಂಚೆ ಕಚೇರಿಯನ್ನು ಅಲ್ಲೇ ಸಮೀಪದ ಯಾಸೀನ್ ಪ್ರಿಂಟರ್ಸ್ ಎದುರುಗಡೆ ಇರುವ ನಝೀರ್ ಅಹ್ಮದ್ ಅವರ ಖಾಸಗಿ ಕಟ್ಟಡದ ನೆಲ ಅಂತಸ್ತಿನ ಕೋಣೆಗೆ ಸ್ಥಳಾಂತರಿಸಲಾಗಿದ್ದು, ಕಳೆದ ಗುರುವಾರದಿಂದ ನೂತನ ಕಚೇರಿಯಲ್ಲಿ ಕಾರ್ಯಾರಂಭಗೊಂಡಿದೆ. 

ಸ್ಥಳಾಂತರಗೊಂಡ ಕಚೇರಿಯನ್ನು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ ಏಂಜಲ್ ರಾಜ್ (ಐಪಿಒಎಸ್) ಉದ್ಘಾಟಿಸಿದರು. ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ ಎಂ, ಕಂಪ್ಯೂಟರ್ ತಂತ್ರಜ್ಞ ನೂತನ್ ವೈ ಬಂಗೇರ, ಉಪ ಅಂಚೆ ಪಾಲಕಿ ಅನಿತಾ, ಅಂಚೆ ಸಹಾಯಕಿ ಪುಷ್ಪಾವತಿ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. 

ಇದೀಗ ಜನಸ್ನೇಹಿ ಹಾಗೂ ಗ್ರಾಹಕ ಸ್ನೇಹಿಯಾದ ಸ್ಥಳದಲ್ಲಿ ಇಲ್ಲಿನ ಅಂಚೆ ಕಚೇರಿ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರು ಸುಲಭವಾಗಿ ಸೇವೆಯನ್ನು ಪಡೆದುಕೊಳ್ಳಬಹುದು. 

  • Blogger Comments
  • Facebook Comments

0 comments:

Post a Comment

Item Reviewed: ಮೆಟ್ಟಿಲು ಏರುವ ಸ್ಥಿತಿಯಲ್ಲಿದ್ದ ಪಾಣೆಮಂಗಳೂರು ಅಂಚೆ ಕಚೇರಿಗೆ ಕೊನೆಗೂ ಮುಕ್ತಿ : ನೂತನ ಕಟ್ಟಡಕ್ಕೆ ಸ್ಥಳಾಂತರ Rating: 5 Reviewed By: karavali Times
Scroll to Top