ಪುತ್ತೂರು : ಸರಕಾರಿ ಶಾಲೆಗೆ ನುಗ್ಗಿ ಹಾಳಾದ ಬ್ಯಾಟರಿ ಕದ್ದು ಪರಾರಿಯಾದ ಕಳ್ಳರು - Karavali Times ಪುತ್ತೂರು : ಸರಕಾರಿ ಶಾಲೆಗೆ ನುಗ್ಗಿ ಹಾಳಾದ ಬ್ಯಾಟರಿ ಕದ್ದು ಪರಾರಿಯಾದ ಕಳ್ಳರು - Karavali Times

728x90

10 March 2023

ಪುತ್ತೂರು : ಸರಕಾರಿ ಶಾಲೆಗೆ ನುಗ್ಗಿ ಹಾಳಾದ ಬ್ಯಾಟರಿ ಕದ್ದು ಪರಾರಿಯಾದ ಕಳ್ಳರು

ಪುತ್ತೂರು, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಡಿ-ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ನುಗ್ಗಿದ ಕಳ್ಳರು ಶಾಲಾ ಕೊಠಡಿಯಲ್ಲಿರಿಸಲಾಗಿದ್ದ ಹಾಳಾದ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದಾರೆ. 

ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ವಿಷ್ಣು ಪ್ರಸಾದ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾ 9 ರಂದು ಸಂಜೆ 4.30 ರ ವೇಳೆಗೆ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದು, ಮರುದಿನ ಪೂರ್ವಾಹ್ನ 9.20ಕ್ಕೆ ಶಾಲೆಯ ಕೊಠಡಿಗಳ ಬಾಗಿಲು ತೆರೆಯುವ ಸಂದರ್ಭ ಒಂದನೇ ಅಂತಸ್ತಿನಲ್ಲಿ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾದ ಹಾಳಾದ 16 ಬ್ಯಾಟರಿಗಳನ್ನು ಕಳ್ಳರು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಳವಾದ ಬ್ಯಾಟರಿಗಳ ಮೌಲ್ಯ 8 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2023 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಸರಕಾರಿ ಶಾಲೆಗೆ ನುಗ್ಗಿ ಹಾಳಾದ ಬ್ಯಾಟರಿ ಕದ್ದು ಪರಾರಿಯಾದ ಕಳ್ಳರು Rating: 5 Reviewed By: karavali Times
Scroll to Top