ಉದಾತ್ತ ಸಂವಿಧಾನ ರಚಿಸಿ ಭಾರತವನ್ನು ಜಗತ್ತಿನಲ್ಲೇ ಗುರುತಿಸುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೊಡ್ಡ ಆಸ್ತಿ : ಬಂಟ್ವಾಳ ತಹಶೀಲ್ದಾರ್ ಕೂಡಲಗಿ - Karavali Times ಉದಾತ್ತ ಸಂವಿಧಾನ ರಚಿಸಿ ಭಾರತವನ್ನು ಜಗತ್ತಿನಲ್ಲೇ ಗುರುತಿಸುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೊಡ್ಡ ಆಸ್ತಿ : ಬಂಟ್ವಾಳ ತಹಶೀಲ್ದಾರ್ ಕೂಡಲಗಿ - Karavali Times

728x90

14 April 2023

ಉದಾತ್ತ ಸಂವಿಧಾನ ರಚಿಸಿ ಭಾರತವನ್ನು ಜಗತ್ತಿನಲ್ಲೇ ಗುರುತಿಸುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೊಡ್ಡ ಆಸ್ತಿ : ಬಂಟ್ವಾಳ ತಹಶೀಲ್ದಾರ್ ಕೂಡಲಗಿ

ಬಂಟ್ವಾಳ, ಎಪ್ರಿಲ್ 15, 2023 (ಕರಾವಳಿ ಟೈಮ್ಸ್) : ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮವಾದುದನ್ನು ಕ್ರೋಢೀಕರಿಸಿ ನಮ್ಮ ದೇಶದ ಉದಾತ್ತ ಸಂವಿಧಾನವನ್ನು ರಚಿಸಿದ್ದಾರೆ. ಅತ್ಯುತ್ತಮ ಸಂವಿಧಾನ ರಚಿಸಿ ದೇಶವನ್ನು ಜಗತ್ತಿನಲ್ಲೇ ಗುರುತಿಸುವಂತೆ ಮಾಡಿದ ಡಾ ಬಿ ಆರ್ ಅಂಬೇಡ್ಕರ್ ಅವರು ನಮ್ಮ ದೇಶದ ದೊಡ್ಡ ಆಸ್ತಿಯಾಗಿದ್ದಾರೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಕೊಂಡಾಡಿದರು. 

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ (ಎಪ್ರಿಲ್ 14) ನಡೆದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ದಯಾನಂದ ಕೆ ಎಸ್, ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರ ನಾಥ್ ಮಿತ್ತೂರು, ಉಪ ತಹಸೀಲ್ದಾರ್ ರಾಜೇಶ್ ನಾಯ್ಕ್, ನವೀನ್ ಬೆಂಜನಪದವು, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಶು ಅಬಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಆಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಉದಾತ್ತ ಸಂವಿಧಾನ ರಚಿಸಿ ಭಾರತವನ್ನು ಜಗತ್ತಿನಲ್ಲೇ ಗುರುತಿಸುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೊಡ್ಡ ಆಸ್ತಿ : ಬಂಟ್ವಾಳ ತಹಶೀಲ್ದಾರ್ ಕೂಡಲಗಿ Rating: 5 Reviewed By: karavali Times
Scroll to Top