ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ಸರಕಾರದ 2013-18ರ ಅವಧಿಯಲ್ಲಿ ಸಚಿವನಾಗಿದ್ದಾಗ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 5ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯನಿರ್ವಹಿಸಿದ ತೃಪ್ತಿಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಕನ್ಯಾನದಲ್ಲಿ ಮನೆ ಭೇಟಿ ಕಾರ್ಯಕ್ರಮದಲ್ಲಿ ಮತಯಾಚನೆಗೈದು ಮಾತನಾಡಿದ ಅವರು, ವಿವಿಧ ಪ್ರಗತಿಪರ ಯೋಜನೆಗಳನ್ನು ತಂದು ಬಂಟ್ವಾಳದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಮಾಡಲಾಗಿತ್ತು. ಆದರೂ, ಕಳೆದ ಬಾರಿ ಅಪಪ್ರಚಾರಗಳ ಮೂಲಕ ನನ್ನನ್ನು ಸೋಲಿಸಲಾಯಿತು. ಆದರೆ ಈ ಬಾರಿ ಬಿಜೆಪಿಯ ಇಂತಹ ಅಪಪ್ರಚಾರಗಳಿಗೆ ಜನತೆ ಕಿವಿಗೊಡುತ್ತಿಲ್ಲ. ಹೀಗಾಗಿ ಬಿಜೆಪಿಗರು ಇನ್ನಷ್ಟು ಅಪಪ್ರಚಾರ, ಸುಳ್ಳು ವದಂತಿಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದಾರೆ. ಅಂತಹ ಯತ್ನಗಳನ್ನು ವಿಫಲಗೊಳಿಸಲು ನಾವೂ ಸಜ್ಜಾಗಿದ್ದೇವೆ. ಆ ಮೂಲಕ ಚುನಾವಣೆಯಲ್ಲಿ ದಾಖಲೆಯ ಗೆಲುವಿಗೆ ಸಿದ್ಧತೆ ಭರದಿಂದ ನಡೆದಿದೆ ಎಂದರು.
ಈ ಸಂದರ್ಭ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ರಾಜ್ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಕನ್ಯಾನ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮಜೀದ್ ಕನ್ಯಾನ, ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಸದಸ್ಯ ಕೃಷ್ಣ ನಾಯ್ಕ್, ಪ್ರಮುಖರಾದ ಮೊಯಿದಿನ್ ಮಂಡ್ಯೂರು, ಮೊಯಿದಿನ್ ಹಾಜಿ ಬೈರಿಕಟ್ಟೆ, ಗಂಗಾಧರ್ ಕನ್ಯಾನ, ಖಾಸಿಂ ಮಂಡ್ಯೂರು, ಖಾದರ್ ಡಿ.ಕೆ., ವಸಂತ ಬೆಲ್ಚಾಡ ಪಂಜಾಜೆ, ಉಸ್ಮಾನ್ ಸೆಟ್ಟಿಬೆಟ್ಟು, ಇಬ್ರಾಹಿಂ ಕೊಣಾಲೆ, ಅಬೂಬಕ್ಕರ್ ಅಂಗ್ರಿ, ಗಣೇಶ್ ಕುಮಾರ್ ಅರ್ಪಿಣಿ ಮೊದಲಾದವರು ಇದ್ದರು.
0 comments:
Post a Comment