ಗುಡ್ಡೆಅಂಗಡಿಯಲ್ಲಿ ಸಂಬ್ರಮದ ಈದುಲ್ ಫಿತ್ರ್ ಆಚರಣೆ - Karavali Times ಗುಡ್ಡೆಅಂಗಡಿಯಲ್ಲಿ ಸಂಬ್ರಮದ ಈದುಲ್ ಫಿತ್ರ್ ಆಚರಣೆ - Karavali Times

728x90

23 April 2023

ಗುಡ್ಡೆಅಂಗಡಿಯಲ್ಲಿ ಸಂಬ್ರಮದ ಈದುಲ್ ಫಿತ್ರ್ ಆಚರಣೆ

ಬಂಟ್ವಾಳ, ಎಪ್ರಿಲ್ 23, 2023 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಮಸೀದಿ ಖತೀಬ್ ಅಸ್ವೀಪ್ ದಾರಿಮಿ ಖುತುಬಾ ಹಾಗೂ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭ ಬಂಟ್ವಾಳ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಸಜಿಪ, ಪ್ರಮುಖರಾ ಹಾಜಿ ಮುಹಮ್ಮದ್ ನೀಮಾ, ಉಮ್ಮರ್ ಫಾರೂಕ್ ಎಬಿಸಿ, ಇರ್ಶಾದ್ ಗುಡ್ಡೆಅಂಗಡಿ, ಜಿ ಎ ಅಮಾನುಲ್ಲಾ ಗುಡ್ಡೆಅಂಗಡಿ, ಮಜೀದ್ ಬೋಗೋಡಿ, ಅನ್ಸಾರ್ ಫಾರೆಸ್ಟ್, ಅಬೂಬಕ್ಕರ್ ಮೆಲ್ಕಾರ್, ಸಾದಿಕ್ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು. ಬಳಿಕ ಜಮಾಅತರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.  

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿಯಲ್ಲಿ ಸಂಬ್ರಮದ ಈದುಲ್ ಫಿತ್ರ್ ಆಚರಣೆ Rating: 5 Reviewed By: karavali Times
Scroll to Top