ಬಂಟ್ವಾಳದಲ್ಲಿ ಪ್ರಮುಖರಿಂದ ಪರಮಾಧಿಕಾರ ಚಲಾವಣೆ - Karavali Times ಬಂಟ್ವಾಳದಲ್ಲಿ ಪ್ರಮುಖರಿಂದ ಪರಮಾಧಿಕಾರ ಚಲಾವಣೆ - Karavali Times

728x90

10 May 2023

ಬಂಟ್ವಾಳದಲ್ಲಿ ಪ್ರಮುಖರಿಂದ ಪರಮಾಧಿಕಾರ ಚಲಾವಣೆ

ಬಂಟ್ವಾಳ, ಮೇ 10, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಕುಟುಂಬ ಸಮೇತರಾಗಿ ಬುಧವಾರ ಬೆಳಿಗ್ಗೆ ಕಳ್ಳಿಗೆ ಗ್ರಾಮದ ತೊಡಂಬಿಲ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಪರಮಾಧಿಕಾರ ಚಲಾಯಿಸಿದರು. 

ಇದಕ್ಕೂ ಮುನ್ನ ರೈ ಅವರು ಬಂಟ್ವಾಳ ತಿರುಮಲ ಶ್ರೀ ವೆಂಕರಮಣ ದೇವಸ್ಥಾನ ಹಾಗೂ ಪೆÇಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. 

ಬಂಟ್ವಾಳ ಶಾಸಕ ತನ್ನ ಕ್ಷೇತ್ರದಲ್ಲಿ ಮತದಾನದ ಅವಕಾಶ ಇಲ್ಲದೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ತೆಂಕೆ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು. 

ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ ಜನಾರ್ದನ ಪೂಜಾರಿ ಅವರು ಬಂಟ್ವಾಳದ ಎಸ್ ವಿ ಎಸ್ ಶಾಲಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ 47 ಮಂದಿ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಒಂದಷ್ಟು ವೇಗ ಪಡೆದುಕೊಂಡಿದೆ. ವಿವಿಧೆಡೆ ಮದುವೆ ಕಾರ್ಯಕ್ರಮಗಳು ಇದ್ದುದರಿಂದ ಆರಂಭದಲ್ಲಿ ಜನ ಮತದಾನಕ್ಕೆ ಬರದೆ ಕಾರ್ಯಕ್ರಮ ಮುಗಿಸಿ ಮತ ಕೇಂದ್ರಗಳತ್ತ ಬರುತ್ತಿದ್ದ ದೃಶ್ಯ ಕಂಡುಬಂದರೆ, ಇನ್ನು ಕೆಲವೆಡೆ ಬೆಳಿಗ್ಗೆಯೇ ಮತದಾನಕ್ಕೆ ಮುಂದಾದ ಜನ ಬಳಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತಿದ್ದ ದೃಶ್ಯ ಕಂಡು ಬಂತು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಪ್ರಮುಖರಿಂದ ಪರಮಾಧಿಕಾರ ಚಲಾವಣೆ Rating: 5 Reviewed By: karavali Times
Scroll to Top