ಬಿಜೆಪಿಗರಂತೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಸಂಘರ್ಷಕ್ಕೆ ಇಳಿಯದ ಪರಿಣಾಮ ಬಂಟ್ವಾಳದಲ್ಲಿ ಶಾಂತಿಯಿದೆ ಹೊರತು ಇದು ಬಿಜೆಪಿ ಅಥವಾ ಶಾಸಕರ ಸಾಧನೆಯಲ್ಲ : ಅಶ್ವನಿ ಕುಮಾರ್ ರೈ ಪ್ರತಿಪಾದನೆ - Karavali Times ಬಿಜೆಪಿಗರಂತೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಸಂಘರ್ಷಕ್ಕೆ ಇಳಿಯದ ಪರಿಣಾಮ ಬಂಟ್ವಾಳದಲ್ಲಿ ಶಾಂತಿಯಿದೆ ಹೊರತು ಇದು ಬಿಜೆಪಿ ಅಥವಾ ಶಾಸಕರ ಸಾಧನೆಯಲ್ಲ : ಅಶ್ವನಿ ಕುಮಾರ್ ರೈ ಪ್ರತಿಪಾದನೆ - Karavali Times

728x90

4 May 2023

ಬಿಜೆಪಿಗರಂತೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಸಂಘರ್ಷಕ್ಕೆ ಇಳಿಯದ ಪರಿಣಾಮ ಬಂಟ್ವಾಳದಲ್ಲಿ ಶಾಂತಿಯಿದೆ ಹೊರತು ಇದು ಬಿಜೆಪಿ ಅಥವಾ ಶಾಸಕರ ಸಾಧನೆಯಲ್ಲ : ಅಶ್ವನಿ ಕುಮಾರ್ ರೈ ಪ್ರತಿಪಾದನೆ

ಬಂಟ್ವಾಳ, ಮೇ 05, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಶುದ್ಧಹಸ್ತ ವ್ಯಕ್ತಿ. ಸರಳ, ಸಜ್ಜನಿಕೆಯ ಇವರ ವಿರುದ್ಧ ಆರೋಪ ಮಾಡಲೂ ಬಿಜೆಪಿಗರಿಗೆ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ, ಅವರ ವಿರುದ್ಧ ಸುಳ್ಳು ವದಂತಿಗಳನ್ನು ಹರಡುವ ಕಾರ್ಯದಲ್ಲಿ  ನಿರತರಾಗಿದ್ದಾರೆ ಎಂದು ಕೆಪಿಸಿಸಿ ಮುಖಂಡ ಎಂ ಅಶ್ವನಿ ಕುಮಾರ್ ರೈ ಆಕ್ರೋಶ ವ್ಯಕ್ತಪಡಿಸಿದರು. 

ರಮಾನಾಥ ರೈ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟ್ವಾಳದಲ್ಲಿ ಶಾಂತಿಯಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವಾಗ ಬಂಟ್ವಾಳದ ಶಾಂತಿ ಕೆಡಿಸಿದವರು ಯಾರು ಎಂದೂ ಬಿಜೆಪಿಗರು ಹೇಳಬೇಕು. ಕಾಂಗ್ರೆಸಿಗರು ಯಾವುದೇ ಗಲಭೆ, ಹಿಂಸೆಯಲ್ಲಿ ಭಾಗಿಯಾದವರಲ್ಲ. ಬಂಟ್ವಾಳದಲ್ಲಿ ನಡೆದ ಹಿಂಸಾಚಾರಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಆರೋಪಿಗಳ ಸ್ಥಾನದಲ್ಲಿಲ್ಲ. ಕಾಂಗ್ರೆಸ್ ಯಾವತ್ತೂ ಶಾಂತಿ ಮತ್ತು ಸೌಹಾರ್ಧತೆಯನ್ನು ಬಯಸುವ ಪಕ್ಷ. ಹೀಗಾಗಿ, ಕಳೆದ ಐದು ವರ್ಷದಲ್ಲಿ ಬಂಟ್ವಾಳದಲ್ಲಿ ಶಾಂತಿಯಿದೆ. ಬಂಟ್ವಾಳದ ಶಾಂತಿಯ ಹಿಂದೆ ಕಾಂಗ್ರೆಸ್ ಪಕ್ಷದ ಅದರ ಕಾರ್ಯಕರ್ತರ ಕೊಡುಗೆ ಇದೆಯೇ ಹೊರತು ಇದು ಬಿಜೆಪಿಗರ ಅಥವಾ ಶಾಸಕರ ಸಾಧನೆಯಲ್ಲ ಎಂದು ವಿಮರ್ಶಿಸಿದರು. 

ಇದೇ ವೇಳೆ ಮಾತನಾಡಿದ ರಮಾನಾಥ ರೈ ಅವರು, ಕಳೆದ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿ. ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಸಂಬಂಧಿಸಿ ನನ್ನದೇ ಆದ ಕೆಲವೊಂದು ಕನಸುಗಳಿವೆ. ಆ ಕನಸುಗಳು ಪೂರ್ಣಗೊಂಡಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮತ್ತೊಂದು ಅವಕಾಶ ನೀಡಿದರೆ, ಆ ಕನಸುಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ಭರವಸೆ ನೀಡಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಗರಂತೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಸಂಘರ್ಷಕ್ಕೆ ಇಳಿಯದ ಪರಿಣಾಮ ಬಂಟ್ವಾಳದಲ್ಲಿ ಶಾಂತಿಯಿದೆ ಹೊರತು ಇದು ಬಿಜೆಪಿ ಅಥವಾ ಶಾಸಕರ ಸಾಧನೆಯಲ್ಲ : ಅಶ್ವನಿ ಕುಮಾರ್ ರೈ ಪ್ರತಿಪಾದನೆ Rating: 5 Reviewed By: karavali Times
Scroll to Top